ಪಿಂಚಣಿ ಹೆಚ್ಚು ಮಾಡಬೇಕೆಂದು ಆಗ್ರಹ: ನಗರದಲ್ಲಿ ನಿವೃತ್ತ ನೌಕರರ ಪ್ರತಿಭಟನೆ

ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸಿ ಮಂಡ್ಯ ನಗರದ ಡಿಸಿ ಕಚೇರಿ ಎದುರು ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಿವೃತ್ತ ನೌಕರರು  ಪ್ರತಿಭಟನೆ ನಡೆಸಿದರು.
ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸಿ ಮಂಡ್ಯ ನಗರದ ಡಿಸಿ ಕಚೇರಿ ಎದುರು ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಂಚಣಿ ಮೊತ್ತ ಹೆಚ್ಚಳಕ್ಕೆ ಒತ್ತಾಯ
  • ನಗರದಲ್ಲಿ ನಿವೃತ್ತ ನೌಕರರ ಪ್ರತಿಭಟನೆ
  • ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ
ಮಂಡ್ಯ: ಪಿಂಚಣಿ ಮೊತ್ತ ಹೆಚ್ಚು ಮಾಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಿವೃತ್ತ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನಿವೃತ್ತ ನೌಕರರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ರವಾನಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಗರಿಷ್ಟ ಪಿಂಚಣಿ ಆಯ್ಕೆ ಇಚ್ಛಿಸುವವರು ಆನ್‌ಲೈನ್ ಮೂಲಕ ಜಂಟಿ ಆಯ್ಕೆ ಪತ್ರವನ್ನು ಸಲ್ಲಿಸಲು ಆದೇಶಿಸಲಾಗಿತ್ತು. ಅದರಂತೆ 2025ಕ್ಕೆ ಮುಂಚಿತವಾಗಿ ನಿವೃತ್ತ ನೌಕರರು ಅರ್ಜಿ ಸಲ್ಲಿಸಿರುತ್ತಾರೆ. ಉದ್ಯೋಗದಾತರಿಂದ ಅನುಮೋದನೆಗೊಂಡು ಗರಿಷ್ಟ ಪಿಂಚಣಿಗಾಗಿ ಸಲ್ಲಿರುವ ಜಂಟಿ ಆಯ್ಕೆ ಪತ್ರಗಳನ್ನು ಪರಿಗಣಿಸಿ ಹೆಚ್ಚಿನ ಪಿಂಚಣಿ ಸೌಲಭ್ಯ ಪಡೆಯಲು ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಡಿಸಿಸಿ ಬ್ಯಾಂಕ್, ಟಿಎಪಿಸಿಎಂಎಸ್, ಕೆಎಸ್‌ಆರ್‌ಟಿಸಿ ಹಾಗೂ ಸಕ್ಕರೆ ಕಾರ್ಖಾನೆ ನೌಕರರು ಸೇರಿದಂತೆ ಕನಿಷ್ಟ ಪಿಂಚಣಿಯನ್ನು 1,000 ರೂನಿಂದ 7,500 ರೂಗೆ ಹೆಚ್ಚಿಸಬೇಕು. ಉಚಿತ ವೈದ್ಯಕೀಯ ಸೌಲಭ್ಯ, 2016 ಮತ್ತು 2022 ನ್ಯಾಯಾಲಯದ ಆದೇಶದ ಪ್ರಕಾರ ಹೆಚ್ಚಿನ ಪಿಂಚಣಿ ಜಾರಿಗೊಳಿಸಬೇಕು. ಇಪಿಎಸ್ ಪಿಂಚಣಿದಾರರಲ್ಲದವರಿಗೆ 5,000 ರೂ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಕೆ.ರಾಮೇಗೌಡ, ಖಜಾಂಚಿ ಚಲುವಯ್ಯ, ಮುಖಂಡರಾದ ಹುಚ್ಚಪ್ಪ, ಬಾಲಕೃಷ್ಣ, ನಾರಾಯಣ್, ಚಿಕ್ಕೇಗೌಡ, ವರದರಾಜು, ವೆಂಕಟೇಶ್, ರಾಮಣ್ಣ, ರಮೇಶ್, ಸಿದ್ದಪ್ಪಾಜಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net