ಅದರಂತೆ 27ರಂದು ಪರೀಕ್ಷೆ ಪೂರ್ಣಗೊಂಡವು. ಅದೇ ದಿನ ಸಂಜೆ 4ಗಂಟೆಗೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ವಿಶೇಷವೆಂದರೆ ಪ್ರಕ್ರಿಯೆ ಪೂರ್ಣಗೊಂಡ ಒಂದೂವರೆ ಗಂಟೆಯಲ್ಲಿ ಪ್ರಾಂಶುಪಾಲ ಪ್ರೊ.ಕೆ.ಗುರುರಾಜ್‌ಪ್ರಭು ಫಲಿತಾಂಶ ಬಿಡುಗಡೆ ಮಾಡಿದರು. ಇದಕ್ಕೆ ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ರವಿಕಾಂತ್ ಲಮಾಣಿ, ಸಮಿತಿಯ ಸಂಚಾಲಕ ಡಾ.ವಿ.ಶಿವಕೀರ್ತಿ, ಸಹ ಸಂಚಾಲಕ ಡಾ.ಎಸ್.ಶಿವರಾಮು, ಮೌಲ್ಯಮಾಪನ ಸಂಯೋಜಕ ಎಂ.ಮಾದೇಗೌಡ, ಸ್ನಾತಕ ಪದವಿ ಪರೀಕ್ಷೆಗಳ ವಿಷಯ ನಿರ್ವಾಹಕ ಕೆ.ಜೆ.ಮನು, ಪರೀಕ್ಷಾಂಗ ವಿಭಾಗದ ಸಿಬ್ಬಂದಿ ಕೆ.ಎಸ್.ಸಾಗರ್, ಎಸ್.ಎಂ.ನವ್ಯಶ್ರೀ, ಬಿ.ಆರ್.ಪವಿತ್ರಾ, ಎಸ್.ಎಸ್.ಸಿಂಧುಶ್ರೀ ಅವರ ತಂಡ ಶ್ರಮಿಸಿದೆ.