ಸಂಶೋಧನಾ ಬರಹ ಶಿಸ್ತಿನಿಂದ ಕೂಡಿರಲಿ

ಕೆ.ಆರ್.ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಮರ್ಥ್ಯವೃದ್ಧಿ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಪಾಲ್ಗೊಂಡಿದ್ದರು. ಡಾ.ಪ್ರಮೀಳಾ, ಪ್ರೊ.ಸಿ.ಪಿ.ರಾಮಶೇಷ, ಡಾ.ಎಚ್.ವಿ.ಶಿಲ್ಪಶ್ರೀ, ಎನ್.ಪ್ರಸಾದ್,  ಡಾ.ಮೋಹನ್‌ಕುಮಾರ್,ನಯ್ ಪ್ರಭು, ಶಿವಕುಮಾರ್ ಕಾರೇಪುರ, ಸಿದ್ಧಾರ್ಥ್ ಇದ್ದರು.
ಕೆ.ಆರ್.ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಮರ್ಥ್ಯವೃದ್ಧಿ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಪಾಲ್ಗೊಂಡಿದ್ದರು. ಡಾ.ಪ್ರಮೀಳಾ, ಪ್ರೊ.ಸಿ.ಪಿ.ರಾಮಶೇಷ, ಡಾ.ಎಚ್.ವಿ.ಶಿಲ್ಪಶ್ರೀ, ಎನ್.ಪ್ರಸಾದ್, ಡಾ.ಮೋಹನ್‌ಕುಮಾರ್,ನಯ್ ಪ್ರಭು, ಶಿವಕುಮಾರ್ ಕಾರೇಪುರ, ಸಿದ್ಧಾರ್ಥ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ
  • ಒಂದು ದಿನದ ಉಪನ್ಯಾಸಕರ ಸಾಮರ್ಥ್ಯವೃದ್ಧಿ ಕಾರ್ಯಕ್ರಮ
ಕೆ.ಆರ್.ಸಾಗರ: ಸಂಶೋಧನೆಯಲ್ಲಿ ನೈತಿಕತೆಯ ಬಲವರ್ಧನೆ ಹಾಗೂ ಪ್ರಕಟಣೆಯ ವಿಧಾನಗಳು ಎಂಬ ವಿಷಯ ಕುರಿತು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಇತ್ತೀಚೆಗೆ ಒಂದು ದಿನದ ಉಪನ್ಯಾಸಕರ ಸಾಮರ್ಥ್ಯವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೈಸೂರಿನ ಮಹಾರಾಜ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎ.ಸಿ.ಪ್ರಮೀಳಾ ಮಾತನಾಡಿ, ಸಂಶೋಧನೆ ಎಂಬುದು ನಿರಂತರವಾದದ್ದು. ಇದನ್ನು ಬರೆಯುವುದು ಒಂದು ಸವಾಲಾದರೆ, ಪ್ರಕಟಿಸುವುದು ಮತ್ತೊಂದು ಸವಾಲು. ಸಂಶೋಧನಾ ಬರಹಗಳು ಸಂಶೋಧನಾ ಶಿಸ್ತಿನಿಂದ ಕೂಡಿರಬೇಕು ಎಂದರು.
ವಿಶ್ರಾಂತ ಗ್ರಂಥಪಾಲಕ ಪ್ರೊ.ಸಿ.ಪಿ.ರಾಮಶೇಷ ಮಾತನಾಡಿ, ಸಂಶೋಧನೆಯಲ್ಲಿ ಕೃತಿ ಚೌರ್ಯಗಳು ಹೆಚ್ಚಾಗಿದ್ದು ಅದನ್ನು ತಪ್ಪಿಸ ಬೇಕಾದಲ್ಲಿ ನೇರ ಸಂಶೋಧಕರೇ ಹೊಣೆಯಾಗಿರಬೇಕು ಎಂದರು.
ಕಾಲೇಜು ಪ್ರಾಂಶುಪಾಲೆ ಡಾ.ಎಚ್.ವಿ.ಶಿಲ್ಪಶ್ರೀ ಮಾತನಾಡಿ, ಅಧ್ಯಾಪಕರು ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಐಕ್ಯೂಎಸಿ ಸಂಚಾಲಕ ಎನ್.ಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಸಂಚಾಲಕ ಡಾ.ಮೋಹನ್‌ಕುಮಾರ್, ಸಹ ಪ್ರಾಧ್ಯಾಪಕ ವಿನಯ್ ಪ್ರಭು, ಶಿವಕುಮಾರ್ ಕಾರೇಪುರ, ಸಿದ್ಧಾರ್ಥ್ ಮುಖ್ಯ ಗ್ರಂಥಪಾಲಕರಾದ ಶಿವಶಾಂತಿ, ಸಹಾಯಕ ಪ್ರಾಧ್ಯಾಪಕರಾದ ಅಂಬುಜಾಕ್ಷಿ, ಡಾ.ಸುಮಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net