ಕ್ಷೇತ್ರ ಅಧ್ಯಯನದಿಂದ ಸಂಶೋಧನೆಯಲ್ಲಿ ಗಟ್ಟಿತನ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಸಲಹೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಂಶೋಧನಾ ಕಮ್ಮಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಂಶೋಧನಾ ಕಮ್ಮಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ದಿಕ್ಕಿನೆಡೆಗೆ ಕನ್ನಡ ಸಂಶೋಧನಾ ಕಮ್ಮಟ
  • ಒಂದೆಡೆ ಕುಳಿತು ಕೆಲಸ ಮಾಡಿದರೆ ಗಟ್ಟಿತನದಿಂದ ಮಾತನಾಡಲು ಆಗುವುದಿಲ್ಲ
ಮಂಡ್ಯ: ಸಂಶೋಧನೆಯಲ್ಲಿ ಕ್ಷೇತ್ರ ಅಧ್ಯಯನ ಮಾಡಿದರೆ ಗಟ್ಟಿತನ ಸಿಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಅಭಿಪ್ರಾಯಪಟ್ಟರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ‘ಹೊಸ ದಿಕ್ಕಿನೆಡೆಗೆ ಕನ್ನಡ ಸಂಶೋಧನಾ ಕಮ್ಮಟ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದೆಡೆ ಕುಳಿತು ಕೆಲಸ ಮಾಡಿದರೆ ಗಟ್ಟಿತನದಿಂದ ಮಾತನಾಡಲು ಆಗುವುದಿಲ್ಲ ಎಂಬುದನ್ನು ಸಂಶೋಧನಾ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಐದು ಗೋಷ್ಠಿ, 10 ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡ ಸಂಶೋಧನಾ ಕಮ್ಮಟ ಅಚ್ಚುಕಟ್ಟಿನಿಂದ ಕೂಡಿದೆ. ಕನ್ನಡಕ್ಕೆ ಇರುವ ಅಸ್ಮಿತೆ ಎಂದಿಗೂ ಕುಂದುವುದಿಲ್ಲ. ಕನ್ನಡವು ನಮ್ಮ ಕರ್ನಾಟಕದ ಅಸ್ಮಿತೆ ಎಂಬುದನ್ನು ಮತ್ತೊಮ್ಮೆ ಹೇಳುವ ಮೂಲಕ ಸರ್ಕಾರವು ಇದರ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಫ್ರೆಂಚ್ ಸಂಶೋಧಕರೊಬ್ಬರು ಭಾಷೆಗಿಂತ ಬದುಕು ಮುಖ್ಯ ಎನ್ನುತ್ತಾರೆ. ಬದುಕು ಭಾಷೆಯನ್ನು ರೂಪಿಸುತ್ತದೆ. ಕನ್ನಡ ಭಾಷೆ ಅಭಿವೃದ್ಧಿಗಾಗಿ ಸರ್ಕಾರ ಒಟ್ಟು 3016 ಆದೇಶ, ಸುತ್ತೋಲೆಗಳನ್ನು ಹೊರಡಿಸಿದೆ. ಅದನ್ನು ಅನುಷ್ಠಾನಕ್ಕೆ ತರುವುದು ಅಧಿಕಾರಿಗಳ ಕೆಲಸ. ಭಾಷೆಯ ಅವನತಿ ಜನರ ಮಧ್ಯೆ ನಿಧಾನವಾಗಿ ಆಗುತ್ತಿದೆ. ಕನ್ನಡ ಭಾಷೆ ಕಡ್ಡಾಯಕ್ಕಿಂತ ಅನಿವಾರ್ಯತೆ ಆಗಬೇಕಿದೆ. ಭಾಷೆ ಉಳಿಸುವುದು ಸರ್ಕಾರದ ಕೆಲಸ ಮಾತ್ರವಲ್ಲ, ಅದು ಎಲ್ಲ ಕನ್ನಡಿಗರ ಜವಾಬ್ದಾರಿ ಎಂದರು.
ಹಿರಿಯ ವಿದ್ವಾಂಸ ಡಾ.ರಾಮೇಗೌಡ, ಲೇಖಕ ಮ.ರಾಮಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಪ್ರೊ.ಕೆಂಪಮ್ಮ ಇದ್ದರು.
ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆರಡಿ ಮಲ್ಲಯ್ಯ ಕಟ್ಟೇರ ಅವರು ಸಹ ಕನ್ನಡ ಸಂಶೋಧನೆ ಮುನ್ನೋಟ ಮಂಡಿಸಿದರು. ವರ್ತನಮಾನದಲ್ಲಿ ಕನ್ನಡ ಭಾಷೆಯ ವಿಸ್ತಾರದ ನೆಲೆಗಳು ಎಂಬ ವಿಷಯನ್ನು ಬೆಂಗಳೂರು ದೃಶ್ಯ ಮಾನವ ಶಾಸ್ತ್ರಜ್ಞ ಸಿರಿಗಂಧ ಶ್ರೀನಿವಾಸಮೂರ್ತಿ, ಬೆಂಗಳೂರಿನ ಸರ್ಕಾರಿ ಆರ್.ಸಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಹ ಪ್ರಾಧ್ಯಾಪಕ ಸುಭಾಷ್ ರಾಜಮಾನೆ, ಸಂಶೋಧನಾ ಬರಹ: ತಾಂತ್ರಿಕ ಸಂಗತಿಗಳು ಕುರಿತು ಮೈಸೂರು ಕುವೆಂಪುನಗರದ ಸರ್ಕಾರಿ ಪ್ರ.ದ. ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪಿ.ಬೆಟ್ಟೇಗೌಡ, ಸಿಂಧನೂರು ಸರ್ಕಾರಿ ಪ್ರ.ದ ಕಾಲೇಜಿನ ಪ್ರಾಧ್ಯಾಪಕ ಜಾಜಿ ದೇವೇಂದ್ರಪ್ಪ ವಿಷಯ ಮಂಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net