ಮದ್ದೂರು ತಾಲೂಕಿನ ಎನ್.ಕೋಡಿಹಳ್ಳಿಯ ಸಮೀಪದ ಶಿಂಷಾನದಿಯಲ್ಲಿ ಏಕಾಏಕಿ ನೀರು ಹೆಚ್ಚಾಗಿ ನೀರು ಪಾಲಾಗಿದ್ದ ಜಾನುವಾರುಗಳನ್ನು ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೋಟ್ ಸಹಾಯದಿಂದ ರಕ್ಷಣೆ ಮಾಡಿದರು.
ಮದ್ದೂರು:ತಾಲೂಕಿನ ಎನ್.ಕೋಡಿಹಳ್ಳಿಯ ಸಮೀಪದ ಶಿಂಷಾನದಿಯಲ್ಲಿ ಏಕಾಏಕಿ ನೀರು ಹೆಚ್ಚಾಗಿ ನೀರು ಪಾಲಾಗಿದ್ದ ಜಾನುವಾರುಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಗ್ರಾಮದ ಸುಶೀಲಮ್ಮ ಅವರು 1 ಎಮ್ಮೆ ಹಾಗೂ 4 ಹಸುಗಳನ್ನು ಬುಧವಾರ ಮಧ್ಯಾಹ್ನ ಸಮಾರು 3 ಗಂಟೆ ಸಮಯದಲ್ಲಿ ಶಿಂಷಾನದಿ ಸಮೀಪ ಮೇಯಿಸುತ್ತಿದ್ದರು. ಶಿಂಷಾನದಿಯಲ್ಲಿ ಅಧಿಕ ನೀರು ಬಂದ ಪರಿಣಾಮ ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ವಿಜಯ್‌ಕುಮಾರ್, ಸಿಬ್ಬಂದಿ ಯಮುನಪ್ಪ, ಮಾದೇಗೌಡ, ಉತ್ತಮ, ವಿನಯ್ ಹಾಗೂ ಸ್ಥಳಿಯರಾದ ಗಿರೀಶ್, ಸಚಿನ್ ಅವರು ನದಿಯಲ್ಲಿ ಬೋಟ್ ಸಹಾಯದಿಂದ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಜಾನುವಾರುಗಳನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಕಾರ್ಯದ ಬಗ್ಗೆ ರೈತ ಮಹಿಳೆ ಸುಶೀಲಮ್ಮ ಹಾಗೂ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.