ಮಾಂಸಕ್ಕಾಗಿ ಕಡಿಯಲು ತಂದಿದ್ದ ಎತ್ತು ರಕ್ಷಣೆ

ತಾಲೂಕಿನ ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಕೋಡಿಹಳ್ಳಿ ಗ್ರಾಮದಲ್ಲಿ ಮಾಂಸ ಮಾರಾಟಕ್ಕಾಗಿ ಕಡಿಯಲು ತಂದಿದ್ದ ಎತ್ತನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಕ್ಷಿಸಿದರು.
ತಾಲೂಕಿನ ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಕೋಡಿಹಳ್ಳಿ ಗ್ರಾಮದಲ್ಲಿ ಮಾಂಸ ಮಾರಾಟಕ್ಕಾಗಿ ಕಡಿಯಲು ತಂದಿದ್ದ ಎತ್ತನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಕ್ಷಿಸಿದರು.
Published on
ಮದ್ದೂರು: ತಾಲೂಕಿನ ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಕೋಡಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಾಂಸಕ್ಕಾಗಿ ಕಡಿಯಲು ತಂದಿದ್ದ ಎತ್ತನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ಥಳೀಯರ ಮಾಹಿತಿ ಮೇರೆಗೆ ರಕ್ಷಿಸಿದ್ದಾರೆ.
ಗ್ರಾಮದ ಸಿದ್ದಿಕ್ ಎಂಬುವರು ಗುರುವಾರ ಬಕ್ರೀದ್ ಹಬ್ಬವಿದ್ದ ಕಾರಣ ಎತ್ತನ್ನು ಕಡಿದು ಮಾಂಸ ಮಾರಾಟ ಮಾಡುವ ಸಲುವಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದರು. ಈ ಬಗ್ಗೆ ಸಚಿನ್ ಹಾಗೂ ಸ್ಥಳೀಯರು ಹಿಂದೂಪರ ಕಾರ್ಯಕರ್ತರು ಹಾಗೂ ಬೆಸಗರಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಹಿಂದೂಪರ ಸಂಘಟನೆ ಕಾರ್ಯಕರ್ತರಾದ ಶಶಾಂಕ್, ವೀರಭದ್ರಸ್ವಾಮಿ, ವಕೀಲರ ಯೋಗಾನಂದ, ಕದಲೂರು ನವೀನ್, ಮಲ್ಲಿಕಾರ್ಜುನ್, ಬಜರಂಗ ದಳದ ತಾಲೂಕು ಸಂಚಾಲಕ ಸ್ವಾಮಿ, ಶರತ್, ನಗರ ಸಹ ಸಂಚಾಲಕ ಗುರುಮಲ್ಲೇಶ್, ಅಜಯ್, ಪವನ್, ಬಾಬು, ಧನು, ದರ್ಶನ್, ರಾಕೇಶ್, ನಂದೀಶ್ ಸೇರಿದಂತೆ ಹಲವರು ಗ್ರಾಮಕ್ಕೆ ತೆರಳಿ ಬಲಿಗಾಗಿ ತಂದಿದ್ದ ಎತ್ತನ್ನು ರಕ್ಷಣೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬೆಸಗರಹಳ್ಳಿ ಠಾಣೆಯ ಪೊಲೀಸರು ವಾಹನವೊಂದರ ಮೂಲಕ ಎತ್ತನ್ನು ಠಾಣೆಗೆ ಕರೆತಂದ ಬಳಿಕ ಹೊಸಗಾವಿಯ ಗೋಶಾಲೆಗೆ ಒಪ್ಪಿಸಿದ್ದಾರೆ. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಬೆಸಗರಹಳ್ಳಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net