ಜ್ಞಾನ ಪಸರಿಸಲು ಕಾರಣರಾದ ಗ್ರಂಥಪಾಲಕರ ಸೇವೆ ಸ್ಮರಿಸಿ

ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನವನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೆಂಕಟರಾಮ ಉದ್ಘಾಟಿಸಿದರು. ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್, ಲೆಕ್ಕ ಸಹಾಯಕಿ ದಿವ್ಯಾ, ಡಿಇಓ ಮಹೇಶ್, ಅರುಣ್, ಪುನೀತ್ ಇದ್ದರು.

Published on

ಶ್ರೀರಂಗಪಟ್ಟಣ:

ಪುಸ್ತಕ ಮತ್ತು ಓದುಗರ ನಡುವೆ ಸೇತುವೆಯಾಗಿ ಜ್ಞಾನ ಪಸರಿಸುವಿಕೆಗೆ ಕಾರಣವಾಗುವ ಗ್ರಂಥಪಾಲಕರ ಸೇವೆಯನ್ನು ಸ್ಮರಿಸುವ ದಿನವಾಗಿದೆ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೆಂಕಟರಾಮ ತಿಳಿಸಿದರು.

ತಾಲೂಕಿನ ಬಲ್ಲೇನಹಳ್ಳಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆ.12 ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥ್ ಅವರ ಜನ್ಮದಿನವನ್ನು ದೇಶಾದ್ಯಂತ ರಾಷ್ಟ್ರೀಯ ಗ್ರಂಥಪಾಲಕರ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಪುಸ್ತಕ ಮತ್ತು ಓದುಗರ ನಡುವೆ ಸೇತುವೆಯಾಗಿ ಜ್ಞಾನ ಪಸರಿಸುವಿಕೆಗೆ ಕಾರಣವಾಗುವ ಗ್ರಂಥ ಪಾಲಕರ ಸೇವೆಯನ್ನು ಸ್ಮರಿಸುವ ದಿನವಾಗಿದೆ ಎಂದರು.
ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಮಾತನಾಡಿ, ಅರಿವು ಕೇಂದ್ರದಲ್ಲಿ ಅಮೂಲ್ಯವಾದ ಗ್ರಂಥ ಬಂಡಾರಗಳಿದ್ದು ಇವುಗಳನ್ನು ಪ್ರದರ್ಶನ ಮಾಡುವ ಮೂಲಕ ಅರಿವು ಕೇಂದ್ರದತ್ತ ಓದುಗರನ್ನು ಆಕರ್ಷಣೆ ಮಾಡುವುದು,ಓದುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಓದುಗರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಈ ವೇಳೆ ವಿನಂತಿ ಮಾಡಿದರು. ಲೆಕ್ಕ ಸಹಾಯಕಿ ದಿವ್ಯ, ಡಿಇಒ ಮಹೇಶ್, ಅರುಣ್, ಪುನೀತ್ ಮತ್ತು ಲೋಕೇಶ್ ಸೇರಿದಂತೆ ಇತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿಶೇಷ ಪುಸ್ತಕಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net