ರಾಂಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಮೂಲ ಶ್ರೀ ಕುಬೇರ ಆಂಜನೇಯಸ್ವಾಮಿ ದೇವರು ಹಾಗೂ ಶ್ರೀ ವಿದ್ಯಾ ಹಯಗ್ರೀವಸ್ವಾಮಿ ದೇಗುಲದ ಪೂಜಾ ಕಾರ್ಯದಲ್ಲಿ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿದ್ದ ಸಂದರ್ಭ.
Published on:
Copied
Follow Us
ಶ್ರೀರಂಗಪಟ್ಟಣ: ತಾಲೂಕಿನ ರಾಂಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಮೂಲ ಶ್ರೀ ಕುಬೇರ ಆಂಜನೇಯಸ್ವಾಮಿ ದೇವರು ಹಾಗೂ ಶ್ರೀ ವಿದ್ಯಾ ಹಯಗ್ರೀವಸ್ವಾಮಿ ದೇಗುಲದ ಉದ್ಘಾಟನಾ ಧಾರ್ಮಿಕ ಕಾರ್ಯದಲ್ಲಿ ಮೈಸೂರು ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದ ದೇಗುಲದ ಮರುನಿರ್ಮಾಣದ ಸೇವಾರ್ಥದಾರರಾದ ಡಿ.ಕೆ.ಸತ್ಯವತಿ- ಡಿ.ಆರ್.ಕೃಷ್ಣಪ್ರಸಾದ್ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ನೆರವೇರಿದ ವಿಶ್ವಖ್ ಸೇನಾ ಆರಾಧನೆ, ವಾಸುದೇವಾ ಪುಣ್ಯಾಹ ವಾಚನ, ರಕ್ಷಾ ಬಂಧನ ವಿಮಾನ ಗೋಪುರ ಕಲಶ ಸ್ಥಾಪನೆಯಲ್ಲಿ ಭಾಗವಹಿಸಿದ ಸಂದರು ಸರ್ವರ ಒಳಿತಿಗೆ ಪ್ರಾರ್ಥಿಸಿದರು.
ಬಳಿಕ ಗ್ರಾಮದ ಅಭಿವೃದ್ಧಿ ಕಾರ್ಯ ವೀಕ್ಷಿಸಿದರು. ಗ್ರಾಮದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ದೇಗುಲ, ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಮಕ್ಕಳ ಅನೂಕೂಲತೆಗೆ ನಿರ್ಮಾಣವಾಗಿರುವ ಸರ್ಕಾರಿ ಶಾಲಾ ಕಟ್ಟಡ ಹಾಗೂ ಸಾರ್ವಜನಿಕರ ಬಳಕೆಗೆ ಗ್ರಾಮದಲ್ಲಿ ಹೈಟೆಕ್ ಶೌಚಗೃಹ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಈ ಕಾಲದಲ್ಲೂ ಇಂತಹ ದಾನಿಗಳು ಅಪರೂಪವಾಗಿದ್ದು, ಗ್ರಾಮಸ್ಥರು ಇಂತಹವರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ಇವರ ಕಾರ್ಯ ನಿಜವಾಗಿಯೂ ಸಮಾಜಕ್ಕೆ ಮಾದರಿಯಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಮತ್ತು ಗುಂಪುಗಾರಿಕೆ ಬೆರಸದಿರಿ ಎಂದರು.
ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ, ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಗ್ರಾಮದ ಮುಖಂಡರಾದ ಗುರುಪ್ರಸಾದ್, ಪ್ರೀತಮ್ ರಾಮ್, ಶ್ಯಾಮಸುಂದರ್, ಮುರುಳಿ, ಮಹದೇವು, ಜಯರಾಮೇಗೌಡ್ರು, ಶ್ರೀನಿವಾಸ್, ಶ್ರೀಕಂಠು, ಸತೀಶ್, ಚಂದ್ರು, ಸುನೀಲ್, ಆರ್.ಕೆ.ರಾಜೇಶ್, ಮಂಜುನಾಥ್ ಇತರರು ಈ ವೇಳೆ ಇದ್ದರು.