ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೆ.ರವಿಕುಮಾರ್ ಅಧ್ಯಕ್ಷರಾಗಿ, ಕೆ.ಶಶಿಕಲಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಎಚ್.ಎಸ್.ಪ್ರಭಾಕರ್, ಕೆ.ಎಲ್.ರವಿ, ಮನುಕುಮಾರ್, ಅಪ್ಪಿಗೌಡ, ಪುಟ್ಟಲಿಂಗಯ್ಯ ಇದ್ದರು.
Published on:
Copied
Follow Us
ಮದ್ದೂರು:
ತಾಲೂಕಿನ ಕಬ್ಬಾರೆ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೆ.ರವಿಕುಮಾರ್, ಉಪಾಧ್ಯಕ್ಷರಾಗಿ ಕೆ.ಶಶಿಕಲಾ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ರವಿಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಶಶಿಕಲಾ ಅವರನ್ನು ಹೊರತು ಪಡಿಸಿ ಬೇರೆ ಯಾರು ನಾಮ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸಂತೋಷ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಮಾಜ ಸೇವಕ ಹುಲಿಗೆರೆಪುರ ಎಚ್.ಎಸ್.ಪ್ರಭಾಕರ್, ಸಂಘದ ಹಾಗೂ ಹಾಲು ಉತ್ಪಾದಕರ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗೂಡಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಈ ಭಾಗದಲ್ಲಿ ಹೈನುಗಾರಿಕೆಯನ್ನೇ ಹೆಚ್ಚಿನ ಪ್ರಮಾಣದಲ್ಲಿ ರೈತರು ವಲಂಬಿಸಿಕೊಂಡಿರುವುದರಿಂದ ಜಿಲ್ಲಾ ಹಾಲು ಒಕ್ಕೂಟ ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಹಾಲು ಉತ್ಪಾದಕರಿಗೆ ಸಮರ್ಪಕವಾಗಿ ತಲುಪಿಸಿ, ಹಾಲು ಉತ್ಪಾದಕರ ಹಿತ ಕಾಯಬೇಕೆಂದರು.
ನೂತನ ಅಧ್ಯಕ್ಷ ಕೆ.ರವಿಕುಮಾರ್ ಮಾತನಾಡಿ, ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಸಂಘದ ಸರ್ವತೋಮುಖ ಅಬಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಸಂಘದ ನಿರ್ದೇಶಕರಾದ ಕೆ.ಪಿ.ಉಮೇಶ್, ಕೃಷ್ಣ, ಚಿಕ್ಕಹೈದ, ಕೆ.ಎಲ್.ಪುಟ್ಟಲಿಂಗಯ್ಯ, ಕೆ.ಬಿ.ಬೋರೇಗೌಡ, ಶಶಿಕಲಾ, ಶಿವಬೋರಯ್ಯ, ಕೆ.ಸಿದ್ದಯ್ಯ, ಮುಖಂಡರಾದ ಕೆ.ಎಲ್.ರವಿ, ಅಪ್ಪಿಗೌಡ, ರಾಮಲಿಂಗ, ಪುಟ್ಟಲಿಂಗಯ್ಯ, ಉಮೇಶ್, ಮಾಸ್ಟರ್ ಪುಟ್ಟಸ್ವಾಮಿ, ಮನುಕುಮಾರ್, ಪ್ರಸನ್ನ, ಕೆ.ಪಿ.ಲಿಂಗಯ್ಯ, ರಾಜಣ್ಣ ಸೇರಿದಂತೆ ಇತರರು ಇದ್ದರು.