ದೊಡ್ಡ ಎಲಚೆಗೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವಿ ಮತ್ತು ಉಪಾಧ್ಯಕ್ಷ ಚಿಕ್ಕಣ್ಣ ಅವರನ್ನು ನಿರ್ದೇಶಕರು ಸನ್ಮಾನಿಸಿದರು. ಮರೀಗೌಡ, ಮಹೇಶ, ರಾಮೇಗೌಡ, ಶಿವಣ್ಣ, ನಾಗರಸ, ಗೌರಮ್ಮ, ನೀಲಮ್ಮ, ರವಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉಪಾಧ್ಯಕ್ಷರಾಗಿ ಚಿಕ್ಕಣ್ಣ ಅವಿರೋಧ ಆಯ್ಕೆ
ಹಲಗೂರು: ಸಮೀಪದ ದೊಡ್ಡ ಎಲಚೆಗೆರೆ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರವಿ ಮತ್ತು ಚಿಕ್ಕಣ್ಣ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರವಿ, ಉಪಾಧ್ಯಕ್ಷ ಸ್ಥಾನಕ್ಕೆ ಚಿಕ್ಕಣ್ಣ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ರಾಮಕೃಷ್ಣ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ರವಿ ಮಾತನಾಡಿ, ಸಂಘದ ಅಭಿವೃದ್ಧಿಗೆ ನಿರ್ದೇಶಕರ ಸಲಹೆ ಪಡೆದು ಹಾಲು ಉತ್ಪಾದಕರಿಗೆ ಸಂಘದ ವತಿಯಿಂದ ಸವಲತ್ತು ಕೊಡಿಸುವುದರ ಜತೆಗೆ ಸಂಘವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.
ನಿರ್ದೇಶಕರಾದ ಮರೀಗೌಡ,ಮಹೇಶ, ರಾಮೇಗೌಡ, ಶಿವಣ್ಣ, ನಾಗರಸ, ಗೌರಮ್ಮ, ನೀಲಮ್ಮ, ರವಿ, ಎಂ.ಸಿ.ರಶ್ಮಿ, ಕಾರ್ಯದರ್ಶಿ ಪುಟ್ಟಸ್ವಾಮಿ, ಮಹಾದೇವ, ಮುಖಂಡರಾದ ಡಿ.ಸಿ.ಪುಟ್ಟಸ್ವಾಮಿ, ಚಂದ್ರಕುಮಾರ್, ಮಾದೇಗೌಡ ಇತರರು ಇದ್ದರು.