ಬ್ರಿಟೀಷರ ಕಾಲದ ರೈಲ್ವೆ ಸೇತುವೆ ದುರಸ್ತಿ

ಶ್ರೀರಂಗಪಟ್ಟಣ ತಾಲೂಕಿನ ರಾಂಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಭಾನುವಾರ ಬ್ರಿಟೀಷರ ಕಾಲದ ರೈಲ್ವೆ ಸೇತುವೆಯ ದುರಸ್ತಿ ಕಾರ್ಯ ನಡೆಸಿದರು.
ಶ್ರೀರಂಗಪಟ್ಟಣ ತಾಲೂಕಿನ ರಾಂಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಭಾನುವಾರ ಬ್ರಿಟೀಷರ ಕಾಲದ ರೈಲ್ವೆ ಸೇತುವೆಯ ದುರಸ್ತಿ ಕಾರ್ಯ ನಡೆಸಿದರು.
Published on
ಶ್ರೀರಂಗಪಟ್ಟಣ: ತಾಲೂಕಿನ ರಾಂಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಒಗ್ಗೂಡಿ ಸುಮಾರು 1 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ಭಾನುವಾರ ಬ್ರಿಟೀಷರ ಕಾಲದ ರೈಲ್ವೆ ಸೇತುವೆಯ ದುರಸ್ತಿ ಕಾರ್ಯ ನಡೆಸಿದರು.
ಪಟ್ಟಣದ ರೈಲ್ವೆ ನಿಲ್ದಾಣ ಸಮೀಪದ ಉತ್ತರ ಕಾವೇರಿಗೆ ಅಡ್ಡಲಾಗಿರುವ ಬ್ರಿಟೀಷರ ಕಾಲದ ಸೇತುವೆಯಲ್ಲಿ ಮಣ್ಣಿನ ಸವೆತ ಕಂಡು ಮಳೆ ಸುರಿದ ವೇಳೆ ಮಂಡಿಯುದ್ದ ನೀರು ನಿಲ್ಲುವ ಜತೆಗೆ ಗುಂಡಿಯಿಂದ ಪಾದಚಾರಿಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅನಾನೂಕೂಲ ಉಂಟಾಗಿತ್ತು. ಈ ಸೇತುವೆ ರಾಂಪುರ, ಅಚ್ಚಪ್ಪಕೊಪ್ಪಲು, ದೊಡ್ಡೇಗೌಡನಕೊಪ್ಪಲು ಸೇರಿದಂತೆ ಪ್ರಸಿದ್ಧ ಶಕ್ತಿಕೇಂದ್ರ ಆರತಿಉಕ್ಕಡ ಸೇರಿದಂತೆ ಹತ್ತಾರು ಹಳ್ಳಿಗಳ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ.
ನದಿಯಾಚೆಗಿನ ಕೆಲ ಹಳ್ಳಿಗಳಿಗೆ ಸುಮಾರು 6 ಕಿ.ಮೀ ದೂರವನ್ನು ಕಡಿತಗೊಳಿಸಿ, ಕೇವಲ 1.5 ಕಿ.ಮೀನಲ್ಲಿ ಶ್ರೀರಂಗಪಟ್ಟಣವನ್ನು ಕ್ರಮಿಸಲು ಅತ್ಯಂತ ಹತ್ತಿರದ ಮಾರ್ಗವಾಗಿದೆ. ಈ ಪುರಾತನ ಸೇತುವೆಯ ಮೇಲ್ಭಾಗದಲ್ಲಿ ಶಿಥಿಲಗೊಂಡಿದ್ದು, ಕೆಳಭಾಗ ಈಗಲೂ ಸದೃಢವಾಗಿದೆ. ಈ ಮಾರ್ಗದ ದುರಸ್ತಿ ಸೇರಿದಂತೆ ಸೇತುವೆಯನ್ನು ಅಭಿವೃದ್ಧಿಪಡಿಸುವಂತೆ ಸಾಕಷ್ಟು ಜನಪ್ರತಿನಿಧಿಗಳು ಹಾಗೂ ರೈಲ್ವೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ನೀಡಿದ್ದರೂ ಯಾರೂ ಸ್ಪಂದಿಸದ ಕಾರಣ ರಾಂಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ಸಮಾನ ಸಮನಸ್ಸುಗಳು ಒಗ್ಗೂಡಿ ಸುಮಾರು 1 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ಕಾಂಕ್ರೀಟ್ ಹಾಕಿ ಅಭಿವೃದ್ಧಿಪಡಿಸುವ ಮೂಲಕ ಸಂಚಾರಕ್ಕೆ ಅನೂಕೂಲ ಮಾಡಿ ಗಮನ ಸೆಳೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net