ಬೆಳಗೊಳ ಗ್ರಾಮದ ಬಳಿ ಹೆಬ್ಬಾವು ರಕ್ಷಣೆ

ಬೆಳಗೊಳ ಗ್ರಾಮದ ಬಳಿಯ ನಾಲೆಯ ಏರಿ ಮೇಲೆ ಕಾಣಿಸಿಕೊಂಡ ಹೆಬ್ಬಾವನ್ನು ಸ್ನೇಕ್ ಸಿದ್ದರಾಜು ರಕ್ಷಣೆ ಮಾಡಿದ್ದಾರೆ
ಬೆಳಗೊಳ ಗ್ರಾಮದ ಬಳಿಯ ನಾಲೆಯ ಏರಿ ಮೇಲೆ ಕಾಣಿಸಿಕೊಂಡ ಹೆಬ್ಬಾವನ್ನು ಸ್ನೇಕ್ ಸಿದ್ದರಾಜು ರಕ್ಷಣೆ ಮಾಡಿದ್ದಾರೆ
Published on
ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಬಳಿಯ ನಾಲೆ ಏರಿ ಮೇಲೆ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಅದನ್ನು ಸ್ನೇಕ್ ಸಿದ್ದರಾಜು ರಕ್ಷಣೆ ಮಾಡಿ ಕಾಡಿಗೆ ಬಿಟಿದ್ದಾರೆ.
ಗ್ರಾಮದ ನಾಲೆ ಏರಿ ಮೇಲೆ ರೈತರೊಬ್ಬರು ತಮ್ಮ ಜಮೀನಿಗೆ ಹೋಗುವ ವೇಳೆ ಹೆಬ್ಬಾವು ನಿಧಾನವಾಗಿ ಚಲಿಸುತ್ತಿದ್ದುದ್ದನ್ನು ನೋಡಿ ಗ್ರಾಮದ ಸ್ನೇಕ್ ಸಿದ್ದರಾಜು ಎಂಬುವರಿಗೆ ವಿಷಯ ಮುಟ್ಟಿಸಿದ್ದಾರೆ . ಸಿದ್ದರಾಜು ಸ್ಥಳಕ್ಕೆ ಬಂದು ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.
ಸುಮಾರು 10 ಅಡಿ ಇರುವ ಹೆಬ್ಬಾವು ಸುಮಾರು 20ರಿಂದ 30 ಕೆ.ಜಿ ತೂಕವಿದೆ ಎಂದು ಸಿದ್ದರಾಜು ಮಾಹಿತಿ ನೀಡಿದ್ದಾರೆ.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net