ಚೆಲುವನಾರಾಯಣನಿಗೆ ಪುಷ್ಪಯಾಗ ಸೇವೆ

 ಶ್ರೀ ದೇವಿಭೂದೇವಿ  ಸಮೇತ ಗರುಡಾರೂಢನಾದ ಶ್ರೀ ಚೆಲುವನಾರಾಯಣ ಸ್ವಾಮಿಗೆ ವಜ್ರಖಚಿತ ಶ್ರೀ ಕೃಷ್ಣರಾಜಮುಡಿಕಿರೀಟಧಾರಣ ಮಹೋತ್ಸವ.
ಶ್ರೀ ದೇವಿಭೂದೇವಿ ಸಮೇತ ಗರುಡಾರೂಢನಾದ ಶ್ರೀ ಚೆಲುವನಾರಾಯಣ ಸ್ವಾಮಿಗೆ ವಜ್ರಖಚಿತ ಶ್ರೀ ಕೃಷ್ಣರಾಜಮುಡಿಕಿರೀಟಧಾರಣ ಮಹೋತ್ಸವ.
Published on

ಪ್ರಮುಖ ಮುಖ್ಯಾಂಶಗಳು

  • 9 ದಿನಗಳ ಜಾತ್ರಾಮಹೋತ್ಸವ

ಮೇಲುಕೋಟೆ: ವಜ್ರಖಚಿತ ಕಿರೀಟಗಳ ಉತ್ಸವಕ್ಕೆ ಭಾರತದಲ್ಲೇ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ ಪ್ರಸಿದ್ಧವಾಗಿದೆ. ಶ್ರೀಕೃಷ್ಣರಾಜಮುಡಿ ಬ್ರಹ್ಮೋತ್ಸವದವೇಳೆ ಮೈಸೂರಿನ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಸಮರ್ಪಿಸಿದ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ವಿವಿದ ಉತ್ಸವಗಳಲ್ಲಿ ಅಲಂಕರಿಸಿ ಭವ್ಯತೆಯೊಂದಿಗೆ ಭಕ್ತರಲ್ಲಿ ಧನ್ಯತಾಭಾವನೆ ಮೂಡಿಸಿತು.

9 ದಿನಗಳ ಜಾತ್ರಾಮಹೋತ್ಸವದಲ್ಲಿ ಕೃಷ್ಣರಾಜಮುಡಿಉತ್ಸವ, ಪ್ರಹ್ಲಾದಪರಿಪಾಲನ, ಗಜೇಂದ್ರಮೋಕ್ಷ ರಥೋತ್ಸವ ಹಾಗೂ ಪಟ್ಟಾಭಿಷೇಕ ಉತ್ಸವಗಳಂದು ಚೆಲುವನಾರಾಯಣನನ್ನು ಅಲಂಕರಿಸಿದ ಕೃಷ್ಣರಾಜಮುಡಿ ಕಿರೀಟದ ದರ್ಶನ ಭಾಗ್ಯ ಪಡೆದ ಮಂಡ್ಯಜಿಲ್ಲಾಧಿಕಾರಿ ಡಾ.ಕುಮಾರ್ ಅಪರಜಿಲ್ಲಾಧಿಕಾರಿ ಶಿವಾನಂದಮೂರ್ತಿ ಸೇರಿದಂತೆ ಶ್ರೀರಂಗಂ, ಕಂಚಿ, ತಿರುವಲ್ಲಿಕೇಣಿ ಮುಂತಾದ ಕಡೆಗಳಿಂದ ಬಂದಿದ್ದ ದಿವ್ಯಪ್ರಬಂಧ ಪಾರಾಯಣದವರು ಸೇರಿದಂತೆ ನಾಡಿನ ವಿವಿಧಭಾಗಗಳಿಂದ ಭಾಗವಹಿಸಿದ್ದ ಸಹಸ್ರಾರು ಭಕ್ತರು ದೈವೀಕ ಅನುಭೂತಿಪಡೆದರು.
ದೇವಾಲಯದ ಹಿರಿಯಸ್ಥಾನೀಕರ ಹೆಸರಿನ ಸ್ಥಾನೀಕಂ ನಾಗರಾಜಯ್ಯಂಗಾರ್ ಸಾಂಸ್ಕೃತಿಕವೇದಿಕೆಯಿಂದ ನಿಯೋಜಿಸಿದ ನಾದಸ್ವರ ಮತ್ತು ಸ್ಯಾಕ್ಸ್ ಪೋನ್ ಮಂಗಳ ವಾದ್ಯತಂಡಗಳು ವಿದ್ವಾನ್ ಶ್ರೀರಂಗಂ ಶಲ್ವನಾರಾಯಣನ್ ನೇತೃತ್ವದ ದಿವ್ಯಪ್ರಬಂಧ ಪಾರಾಯಣ ಗೋಷ್ಠಿಗಳು ಬ್ರಹ್ಮೋತ್ಸವದ ವಿಶೇಷ ಉತ್ಸವಗಳಿಗೆ ವಿಶೇಷ ಕಳೆತಂದುಕೊಡುವ ಮೂಲಕ ಭಕ್ತರ ಮನಸೂರೆಗೊಂಡವು.
ಬ್ರಹ್ಮೋತ್ಸವ ಮುಕ್ತಾಯದ ನಂತರದ 10ನೇ ತಿರುನಾಳ್ ದಿನವಾದ ಭಾನುವಾರ ಚೆಲುವನಾರಾಯಣಸ್ವಾಮಿಗೆ ಪುಷ್ಪಯಾಗ ಸೇವೆ ಶಾಸ್ರ್ತೋಕ್ತವಾಗಿ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net