ಶ್ರೀಕುಬೇರ ಆಂಜನೇಯಸ್ವಾಮಿ, ಶ್ರೀವಿದ್ಯಾ ಹಯಗ್ರೀವಸ್ವಾಮಿ ದೇಗುಲದಲ್ಲಿ ಪೂಜೆ
ಶ್ರೀರಂಗಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಮೂಲ ಶ್ರೀಕುಬೇರ ಆಂಜನೇಯಸ್ವಾಮಿ ದೇವರು ಹಾಗೂ ಶ್ರೀವಿದ್ಯಾ ಹಯಗ್ರೀವಸ್ವಾಮಿ ದೇಗುಲದ ಪೂಜಾ ಕಾರ್ಯದಲ್ಲಿ ಮಾಜಿ ರವೀಂದ್ರ ಶ್ರೀಕಂಠಯ್ಯ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು. ಮುಖಂಡರಾದ ಪ್ರೀತಮ್ ರಾಮ್, ಮೋಹನ್ ಕುಮಾರ್, ಸೋಮಶೇಖರ್, ಶ್ರೀನಿವಾಸ್, ಶ್ಯಾಮಸುಂದರ್, ಜಯರಾಮೇಗೌಡ್ರು ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
Sri Kubera Anjaneyaswamy
ಶ್ರೀರಂಗಪಟ್ಟಣ: ತಾಲೂಕಿನ ರಾಂಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮೂಲ ಶ್ರೀಕುಬೇರ ಆಂಜನೇಯಸ್ವಾಮಿ ದೇವರು ಹಾಗೂ ಶ್ರೀವಿದ್ಯಾ ಹಯಗ್ರೀವಸ್ವಾಮಿ ದೇಗುಲದ ಪೂಜಾ ಕಾರ್ಯದಲ್ಲಿ ಭಾನುವಾರ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಗ್ರಾಮದ ದೇಗುಲದ ಪುನರ್ನಿರ್ಮಾಣ ಮತ್ತು ಜೀರ್ಣೋದ್ಧಾರ ಸೇವಕರ್ತಕರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿಶ್ವಖ್ ಸೇನಾ ಆರಾಧನೆ, ಪ್ರಾಣ ಪ್ರತಿಷ್ಠಾಪನ ಹೋಮ, ಕುಂಭೋದ್ವಾಸನ, ಶ್ರೀಕುಬೇರ ಆಂಜನೇಯಸ್ವಾಮಿ ಹಾಗೂ ಶ್ರೀವಿದ್ಯಾಹಯಗ್ರೀಯ ಸ್ವಾಮಿ ದೇವರ ಪ್ರಾಣ ಪ್ರತಿಷ್ಠಾಪನ, ಪಂಚಾಮೃತ ಅಭಿಷೇಕ, ಮಂತ್ರಪುಷ್ಪ ಸೇರಿದಂತೆ ವಿವಿಧ ವಿಶೇಷ ಪೂಜೆಗಳ ಸಲ್ಲಿಸಿ ಸರ್ವರ ಒಳಿತಿಗೆ ಪ್ರಾರ್ಥಿಸಿದರು.
ಈ ವೇಳೆ ಗ್ರಾಮದ ಮುಖಂಡರಾದ ಪ್ರೀತಮ್ ರಾಮ್, ಮೋಹನ್ ಕುಮಾರ್, ಸೋಮಶೇಖರ್, ಶ್ರೀನಿವಾಸ್, ಶ್ಯಾಮಸುಂದರ್, ಜಯರಾಮೇಗೌಡ್ರು, ಶ್ರೀಕಾಂತ್, ಮಹದೇವು, ಶ್ರೀಕಂಠು, ಸತೀಶ್, ಸುರೇಶ್ ಅವಿನಾಶ್ ಇತರರು ಉಪಸ್ಥಿತರಿದ್ದರು.