ಆನ್‌ಲೈನ್ ಕಂಪನಿಗಳ ವಿರುದ್ಧ ಆಕ್ರೋಶ: ಪ್ರಾಂತ ರೈತ ಸಂಘ ಹಾಗೂ ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ
ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾಂತ ರೈತ ಸಂಘ ಹಾಗೂ ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೇವಲ ಒಂದು ರೂಪಾಯಿಗೆ ಪ್ರತಿ ಲೀಟರ್ ಹಾಲು ಮಾರಾಟ
ಆನ್‌ಲೈನ್ ಕಂಪನಿಗಳ ವಿರುದ್ಧ ಆಕ್ರೋಶ
ಮಂಡ್ಯ: ಆನ್‌ಲೈನ್ ಕಂಪನಿಗಳು ಕೇವಲ ಒಂದು ರೂಪಾಯಿಗೆ ಪ್ರತಿ ಲೀಟರ್ ಹಾಲು ಮಾರಾಟ ಮಾಡುವ ಮೂಲಕ ಹೈನುಗಾರಿಕೆ ನಂಬಿದ ಲಕ್ಷಾಂತರ ರೈತರ ಬದುಕಿನ ಜತೆ ಆಟವಾಡುತ್ತಿವೆ ಎಂದು ಪ್ರಾಂತ ರೈತ ಸಂಘ ಹಾಗೂ ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಆನ್‌ಲೈನ್ ಕಂಪನಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಆರ್ಥಿಕ ಬೆನ್ನೆಲುಬಾಗಿರುವ ಹೈನುಗಾರಿಕೆ ಇಂದು ಸಂಕಷ್ಟಕ್ಕೆ ಸಿಲುಕಿದೆ. ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ವಾಲ್ಮಾರ್ಟ್‌ನಂತಹ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಅನ್ಯಾಯದ ಪೈಪೋಟಿ ನಡೆಸುತ್ತಿವೆ. ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುವ ಮೂಲಕ ನಂದಿನಿಯಂತಹ ಸಹಕಾರಿ ಸಂಸ್ಥೆಗಳನ್ನು ನಾಶ ಮಾಡಲು ಸಂಚು ರೂಪಿಸುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ಆನ್‌ಲೈನ್ ಕಂಪನಿಗಳ ಅನ್ಯಾಯದ ಮಾರಾಟ ತಂತ್ರಗಳನ್ನು ಕೂಡಲೇ ತಡೆಯಬೇಕು. ಸ್ವಾಮಿನಾಥನ್ ವರದಿಯಂತೆ ಪ್ರತಿ ಲೀಟರ್ ಹಾಲಿಗೆ ಕನಿಷ್ಟ 50 ರೂಪಾಯಿ ಬೆಲೆ ನಿಗದಿಪಡಿಸಬೇಕು. ಗಗನಕ್ಕೇರಿರುವ ಪಶು ಆಹಾರದ ಬೆಲೆಯನ್ನು ಸರ್ಕಾರ ನಿಯಂತ್ರಿಸಬೇಕು. ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಮಹದೇವು, ಗುರುಸ್ವಾಮಿ, ಸಿದ್ದೇಗೌಡ , ಗಣೇಶ್, ನಾಗಮಣಿ, ಪದ್ಮಾ, ಶ್ರೀನಿವಾಸ್, ಮೂರ್ತಿ, ವಿಜಯ್‌ಕುಮಾರ್, ಪರಿಮಳಾ ಇತರರಿದ್ದರು.