ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ, ಜಿಲ್ಲಾ ಕಬ್ಬು ಬೆಳೆಗಾರರ ಸಮಿತಿ ಹಾಗೂ ಬೆಳೆಗಾರರು ಗುರುವಾರ ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿ, ಕಾರ್ಖಾನೆಯ ಎಂಜಿಎಂ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ, ಜಿಲ್ಲಾ ಕಬ್ಬು ಬೆಳೆಗಾರರ ಸಮಿತಿ ಹಾಗೂ ಬೆಳೆಗಾರರು ಗುರುವಾರ ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿ, ಕಾರ್ಖಾನೆಯ ಎಂಜಿಎಂ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
Published on
ಮದ್ದೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಮಂಡ್ಯ ಜಿಲ್ಲಾ ಘಟಕ, ಜಿಲ್ಲಾ ಕಬ್ಬು ಬೆಳೆಗಾರರ ಸಮಿತಿ ಹಾಗೂ ಕಬ್ಬು ಬೆಳೆಗಾರರು ಗುರುವಾರ ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ಮಾಡಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ.ಅಪ್ಪಾಜಿ ಮಾತನಾಡಿ, ಎನ್‌ಎಸ್‌ಎಲ್ ಕಾರ್ಖಾನೆಯು ಕಬ್ಬು ಬೆಳೆಗಾರಿಗೆ ಕೊಡಬೇಕಾದ 50 ರೂ.ಗಳನ್ನು ತಕ್ಷಣ ಪಾವತಿಸಬೇಕು. ರೈತರ ಜಮೀನಿನಿಂದ ಕಾರ್ಖಾನೆವರೆಗೆ ಕಬ್ಬು ಕಟಾವು ಮತ್ತು ಸಾಗಿಸುವ ಖರ್ಚನ್ನು ಕಾರ್ಖಾನೆ ಅಡಳಿತ ಮಂಡಳಿ ಭರಿಸಬೇಕು. ತೂಕದ ಯಂತ್ರ ಹಾಗೂ ಕಬ್ಬಿನ ಸಕ್ಕರೆ ಅಂಶ ಪರೀಕ್ಷಿಸುವ ಯಂತ್ರ ಅಳವಡಿಸಿ ರೈತರಿಗೆ ಪಾರದರ್ಶಕವಾಗಿ ಈ ಬಗ್ಗೆ ತಿಳಿಸಬೇಕೆಂದು ಒತ್ತಾಯಿಸಿದರು.
ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಸರಬರಾಜ ಮಾಡುವ ರೈತರಿಗೆ ಕುಡಿಯುವ ನೀರು ಮತ್ತು ಶೌಚಾಗೃಹ ವ್ಯವಸ್ಥೆ, ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡುವುದು, ಜುಲೈ ಮೊದಲ ವಾರ ಕಾರ್ಖಾನೆ ಪ್ರಾರಂಭಿಸಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್‌ಆರ್‌ಪಿ ದರವನ್ನು ಪೂರ್ಣವಾಗಿ ರೈತರಿಗೆ ಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಕಾರ್ಖಾನೆಯ ಉದಾಸೀನದಿಂದ ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರ ಆದಾಯ ಮತ್ತು ಬೆಳೆ ಕುಂಠಿತವಾಗಿದೆ. ಇದಕ್ಕೆ ಸಂಬಂಧಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕಬ್ಬಿನ ಉತ್ಪನ್ನ ಅತಿ ಹೆಚ್ಚು ಲಾಭದಾಯಕವಾಗಿದ್ದು ಅಂದಾಜು ಒಂದು ಟನ್ ಕಬ್ಬಿಗೆ 15 ಸಾವಿರ ರೂ. ಪಡೆಯುತ್ತಿದ್ದಾರೆ. ಬೋನಸ್ ಕೊಡುತ್ತಿಲ್ಲ ಕೇವಲ 50 ರೂ. ಕಾರ್ಖಾನೆಯವರು ಹೆಚ್ಚಾಗಿ ಕೊಡಲು ಮೀನಮೇಷ ಎಣಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಂತ ಕಾರ್ಯಕಾರಿಣಿ ವೆಂಕಟೇಶ ಪಣಕನಹಳ್ಳಿ, ಕೊಪ್ಪ ಎಫ್‌ಪಿಒ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಜಿಲ್ಲಾ ಮಹಿಳಾ ಪ್ರಮುಖ್ ಇಂದ್ರಮ್ಮ, ತಾಲೂಕು ಮಹಿಳಾ ಪ್ರಮುಖರಾದ ಕಮಲಮ್ಮ, ವಸಂತ, ಬಿಕೆಎಸ್ ಜಿಲ್ಲಾ ಕಾರ್ಯದರ್ಶಿಯಾದ ಜೆ.ಕೆ ಬಸವರಾಜು ಜಯಪುರ, ವೆಂಕಟೇಶ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net