ಒಳಮೀಸಲಾತಿ ಹೋರಾಟ ಸಮಿತಿ ಪ್ರತಿಭಟನೆ: ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕುವಂತೆ ಒತ್ತಾಯ

ಮಂಡ್ಯ ನಗರದಲ್ಲಿ ಕರ್ನಾಟಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ಮಾದರ ಮಹಾಸಭಾದ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದಲ್ಲಿ ಕರ್ನಾಟಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ಮಾದರ ಮಹಾಸಭಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಶಿಷ್ಟ ಮೀಸಲಾತಿ ಹಂಚಿಕೊಳ್ಳಲು ಒಳಮೀಸಲಾತಿ ವಿಧೇಯಕ ಮಸೂದೆ
  • ರಾಜ್ಯಪಾಲರು ಕೂಡಲೇ ಅಂಕಿತ ಹಾಕಬೇಕು
  • ವಿಳಂಬ ನೀತಿಗೆ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೇ ನೇರ ಹೊಣೆಗಾರಿಕೆ
ಮಂಡ್ಯ: ಸಂವಿಧಾನ ಆಶಯದಂತೆ ಪರಿಶಿಷ್ಟ ಮೀಸಲಾತಿ ಹಂಚಿಕೊಳ್ಳಲು ಒಳಮೀಸಲಾತಿ ವಿಧೇಯಕ ಮಸೂದೆಗೆ ರಾಜ್ಯಪಾಲರು ಕೂಡಲೇ ಅಂಕಿತ ಹಾಕಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ಮಾದರ ಮಹಾಸಭಾದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್‌ಎಂ.ವಿ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ರೋಹಿಣಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಈಗಾಗಲೇ ಆದೇಶ ಮಾಡಿರುವಂತೆ ಜಿಲ್ಲಾಡಳಿತ ಹಾಗೂ ತಹಸೀಲ್ದಾರ್‌ಗಳು ಪರಿಶಿಷ್ಟ ಜಾತಿ ಮಾದಿಗ ಜನಾಂಗಕ್ಕೆ ಪ್ರವರ್ಗ-ಎ ಮಾದಿ ಎಂದೇ ಜಾತಿ ದೃಢೀಕರಣ ಪತ್ರ ನೀಡಬೇಕು. ನೇರ ನೇಮಕಾತಿ ಜತೆಗೆ ಹಾಗೂ ಬ್ಯಾಂಕ್‌ಲಾಗ್ ಕೆಐಎಡಿಬಿ, ಬಿಡಿಎ ಮತ್ತು ಸರ್ಕಾರಿ ಗುತ್ತಿಗೆ ಸೇರಿದಂತೆ ಎಲ್ಲ ನೇಮಕಾತಿಯಲ್ಲೂ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಎಸ್‌ಸಿಪಿ, ಟಿಎಸ್‌ಪಿ ಅನುದಾದಲ್ಲೂ 6:6:5 ಅನುಪಾತದಲ್ಲಿ ಹಂಚಿಕೆಯಾಗಬೇಕು. ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಸಹ ರಾಜಕೀಯ ಒಳಮೀಸಲಾತಿ ಕಲ್ಪಿಸಬೇಕು. ಆದಿಜಾಂಬವ ಅಭಿವೃದ್ಧಿ ನಿಗಮ ಡಾ.ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಗೆ ತಲಾ 2 ಸಾವಿರ ಕೋಟಿ ರೂ ನೀಡಬೇಕು. ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗಾಗಿ ಸ್ಪಷ್ಟತೆ ಕೇಳಿ ರಾಜ್ಯ ಸರ್ಕಾರಕ್ಕೆ ಕಡತವನ್ನು ವಾಪಸ್ ಕಳುಹಿಸಿದ್ದು, ಈಗ ಸರ್ಕಾರವು ಸ್ಪಷ್ಟತೆ ನೀಡಿ ಪುನಃ ರಾಜ್ಯಪಾಲರ ಅಂಕಿತಕ್ಕಾಗಿ ಕಡತವನ್ನು ಕಳುಹಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು ವಿಳಂಬ ಮಾಡದೇ ಒಳಮೀಸಲಾತಿ ಮಸೂದೆಗ ಅಂಕಿತ ಹಾಕಬೇಕು. ಇಲ್ಲದಿದ್ದರೆ ಒಳಮೀಸಲಾತಿ ವಿಳಂಬ ನೀತಿಗೆ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೇ ನೇರ ಹೊಣೆಗಾರಿಕೆ ಆಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಮಿತಿಯ ಎನ್.ಆರ್.ಚಂದ್ರಶೇಖರ್, ಸಿ.ಕೆ.ಪಾಪಯ್ಯ, ಪುಟ್ಟರಾಜು, ಶಿವಕುಮಾರ್, ರವಿ, ಸಿದ್ದರಾಜು, ಕೃಷ್ಣ, ಸಿ.ಕೆ.ಸ್ವಾಮಿ, ಕೆಂಪಯ್ಯ, ನಾರಾಯಣಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net