ಅನ್ಯ ಉದ್ದೇಶಕ್ಕೆ ಕೃಷಿ ಇಲಾಖೆ ಸ್ಥಳ ಬಳಸದಿರಿ

ಕೃಷಿ ಸಂಬಂಧಿಸಿದ ಇಲಾಖೆ ಸ್ಥಳವನ್ನು ಬೇರೆ ಇಲಾಖೆಗೆ ಪರಭಾರೆ ಮಾಡದೆ, ಅದೇ ಇಲಾಖೆಗಳ ಅಭಿವೃದ್ಧಿ ಕಾರ್ಯಗಳಿಗೆ  ಮಾತ್ರ ಬಳಸಬೇಕೆಂದು ಒತ್ತಾಯಿಸಿ ರೈತ ಸಂಘದ ವತಿಯಿಂದ ನಗರದ ತೋಟಗಾರಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಶಂಕರೇಗೌಡ, ರವಿಕುಮಾರ್, ಜಿ.ಎ.ಶಂಕರ್, ವಿ.ಸಿ.ಉಮೇಶ್, ವಿನೋದ್‌ಬಾಬು ಇದ್ದರು.
ಕೃಷಿ ಸಂಬಂಧಿಸಿದ ಇಲಾಖೆ ಸ್ಥಳವನ್ನು ಬೇರೆ ಇಲಾಖೆಗೆ ಪರಭಾರೆ ಮಾಡದೆ, ಅದೇ ಇಲಾಖೆಗಳ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಬೇಕೆಂದು ಒತ್ತಾಯಿಸಿ ರೈತ ಸಂಘದ ವತಿಯಿಂದ ನಗರದ ತೋಟಗಾರಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಶಂಕರೇಗೌಡ, ರವಿಕುಮಾರ್, ಜಿ.ಎ.ಶಂಕರ್, ವಿ.ಸಿ.ಉಮೇಶ್, ವಿನೋದ್‌ಬಾಬು ಇದ್ದರು.
Published on

ಮದ್ದೂರು:

ಕೃಷಿ ಇಲಾಖೆಯ ಸ್ಥಳವನ್ನು ಬೇರೆ ಇಲಾಖೆಗೆ ಪರಭಾರೆ ಮಾಡದೆ, ಅದೇ ಇಲಾಖೆಗಳ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ನಗರದ ತೋಟಗಾರಿಕೆ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ತೋಟಗಾರಿಕೆ ಬೆಳೆಗಳ ನಿಖರ ಬೇಸಾಯ ಉತ್ಕೃಷ್ಟ ಕೇಂದ್ರವು ತೋಟಗಾರಿಕೆ ಇಲಾಖೆಗೆ ಸೇರಿದೆ. ಸುಮಾರು 28 ಎಕರೆ ಪ್ರದೇಶ ಹೊಂದಿರುವ ಇದರಲ್ಲಿ ತೋಟಗಾರಿಕೆ ಬೆಳೆಗಳ ನೂತನ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹಲವು ಪಾಲಿಹೌಸ್‌ಗಳು ಇದ್ದು, ನಿರಂತರವಾಗಿ ಉತ್ಪತ್ತಿ ಮತ್ತು ತರಬೇತಿ ಕಾರ್ಯಕ್ರಮಗಳ ನಡೆಯುತ್ತಿವೆ. ಪ್ರತಿ ವರ್ಷ ನಿಯಮಾನುಸುರಾಗವಾಗಿ 20ರಿಂದ 30 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ಇಂತಹ ತರಬೇತಿ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಮತ್ತಷ್ಟು ಅಭಿವೃದ್ಧಿಪಡಿಸಬೇಕು ಮತ್ತು ತೋಟಗಾರಿಕಾ ಸ್ಥಳವನ್ನು ಈಗಾಗಲೇ ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದ್ದು, ಮತ್ತೆ ಯಾವುದೇ ಕಾರಣಕ್ಕೂ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಬಾರದೆಂದು ಸರ್ಕಾರವನ್ನು ರೈತ ಸಂಘ ಒತ್ತಾಯಿಸುತ್ತದೆ ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾ ಖಜಾಂಚಿ ಶೆಟ್ಟಿಹಳ್ಳಿ ರವಿಕುಮಾರ್, ಉಪಾಧ್ಯಕ್ಷ ಜಿ.ಎ.ಶಂಕರ್, ತಾಲೂಕು ಅಧ್ಯಕ್ಷ ವಿ.ಸಿ.ಉಮೇಶ್, ಪ್ರಧಾನ ಕಾರ್ಯದರ್ಶಿ ವಿನೋದ್‌ಬಾಬು, ಮುಖಂಡರಾದ ಎಸ್.ಎಂ.ಸಿದ್ದೇಗೌಡ, ರಮೇಶ್, ಚಂದ್ರಶೇಖರ್, ದಯಾನಂದ, ಕೋಣಸಾಲೆ ಪ್ರಸನ್ನ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net