ಅಧ್ಯಕ್ಷ, ನಿರ್ದೇಶಕರ ರಾಜೀನಾಮೆಗೆ ಆಗ್ರಹ: ಬ್ರಾಹ್ಮಣ ಸಭಾದ ಸದಸ್ಯರ ಧರಣಿ

ಮಂಡ್ಯ ನಗರದಲ್ಲಿ ಬ್ರಾಹ್ಮಣ ಸಭಾದ ಸದಸ್ಯರು ಧರಣಿ ನಡೆಸಿದರು.
ಮಂಡ್ಯ ನಗರದಲ್ಲಿ ಬ್ರಾಹ್ಮಣ ಸಭಾದ ಸದಸ್ಯರು ಧರಣಿ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಭಾದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ
  • ಸಾಮೂಹಿಕವಾಗಿ ನಿರಾಕರಿಸುತ್ತಿರುವುದು ಖಂಡನೀಯವೆಂದು ಆಕ್ರೋಶ
ಮಂಡ್ಯ: ಜಿಲ್ಲಾ ಬ್ರಾಹ್ಮಣ ಸಭಾದಲ್ಲಿ ಭ್ರಷ್ಟಾಚಾರ ನಡೆದಿದೆ. ಆದ್ದರಿಂದ ಅಧ್ಯಕ್ಷ ಹಾಗೂ ನಿರ್ದೇಶಕರು ಕೂಡಲೇ ರಾಜೀನಾಮೆ ನೀಡಬೇಕೆಂದು ಅಗ್ರಹಿಸಿ ಬ್ರಾಹ್ಮಣ ಸಭಾದ ಸದಸ್ಯರು ಧರಣಿ ನಡೆಸಿದರು.
ಸಭಾದ ಕಚೇರಿ ಎದುರು ಜಮಾವಣೆಗೊಂಡ ಸದಸ್ಯರು,ಘೋಷಣೆ ಕೂಗಿದರು. ವಿಚಾರಣಾ ಸಮಿತಿಯ ಸದಸ್ಯ ಅರುಣ್ ಪ್ರಸಾದ್ ಮಾತನಾಡಿ, ಸುಮಾರು ವರ್ಷದಿಂದ ಲಕ್ಷಾಂತರ ರೂ ಭ್ರಷ್ಟಾಚಾರ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. 65 ಲಕ್ಷ ರೂ.ಗೂ ಹೆಚ್ಚು ಹಣ ದುರುಪಯೋಗವಾಗಿದೆ ಎಂದು ದಾಖಲೆಗಳಿಂದ ದೃಢಪಟ್ಟಿದೆ. ಆದರೆ, ಅದನ್ನು ಸಾಮೂಹಿಕವಾಗಿ ನಿರಾಕರಿಸುತ್ತಿರುವುದು ಖಂಡನಿಯವಾಗಿದ್ದು, ಕೂಡಲೇ ದುರುಪಯೋಗವಾಗಿರುವ ಹಣವನ್ನು ಲೆಕ್ಕ ಕೊಡಬೇಕು ಮತ್ತು ಸದಸ್ಯರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಹೊಳಲು ರಾಘವೇಂದ್ರ ಮಾತನಾಡಿ, ಅಂದಾಜು 1 ಕೋಟಿ ರೂ.ಗೂ ಮಿಗಿಲಾದ ಕಂದಾಯ ಪಾವತಿಸಿಲ್ಲ ಎಂದು ತಿಳಿದು ಬಂದಿದೆ. ಇದನ್ನು ಪ್ರಶ್ನಿಸಿದರೆ ಅಧ್ಯಕ್ಷರು ಉಡಾೆಯಿಂದ ವರ್ತಿಸುತ್ತಿದ್ದಾರೆ. ಈ ಭ್ರಷ್ಟಾಚಾರಗಳಿಗೆಲ್ಲ ಅಂತ್ಯ ಹಾಡುವ ಕಾಲ ಬಂದಿದ್ದು, ಜು.25ರಂದು ನಡೆಯಲಿರುವ ಸಾರ್ವಜನಿಕ ಮಹಾ ಸಭೆಯಲ್ಲಿ ಈ ವಿಷಯ ಇತ್ಯರ್ಥವಾಗಬೇಕು. ಇಲ್ಲದಿದ್ದರೆ ಈ ಸಂಬಂಧ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಸಿ ಮುಂದಿನ ಕ್ರಮಕ್ಕಾಗಿ ಒತ್ತಾಯಿಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಭಾದ ನಿರ್ದೇಶಕ ಹೊಳಲು ರಾಘವೇಂದ್ರ, ಅರುಣ್ ಪ್ರಸಾದ್, ಲಕ್ಷ್ಮೀನಾರಾಯಣ, ಸೋಮಕುಮಾರ್, ಜಿ.ವಿ.ಕುಮಾರ್, ವಿದ್ಯಾಶಂಕರ್, ರಾಮಪ್ರಸಾದ್, ಪ್ರೊ.ನರಸಿಂಹಮೂರ್ತಿ, ಶ್ರೀಪಾಟಿ, ಬಾಲಾಜಿ ಸತ್ಯಪ್ಪ, ರಂಗನಾಥ, ಬಾಬು, ನಾಗರಾಜು, ಸಂಧ್ಯಾರಾಣಿ, ಭಾರತಿ, ಶ್ರೀನಿವಾಸನ್, ನರಸಿಂಹನ್, ರಮೇಶ್, ವೆಂಕಟೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net