ಸಾರಿಗೆ ಸೌಲಭ್ಯ ಸಮರ್ಪಕವಾಗಿ ಬಳಕೆಯಾಗಲಿ

 ಡಾಣನಹಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಎಚ್.ಟಿ.ಮಂಜು ಸೋಮವಾರ ಚಾಲನೆ ನೀಡಿದರು. ಐಕನಹಳ್ಳಿ ಕೃಷ್ಣೇಗೌಡ, ಶೇಖರ್, ಮೋಹನ್, ಶೇಖರ್ ರಾಘು, ವಿಜಿ ಮತ್ತಿತರರಿದ್ದರು.
ಡಾಣನಹಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಎಚ್.ಟಿ.ಮಂಜು ಸೋಮವಾರ ಚಾಲನೆ ನೀಡಿದರು. ಐಕನಹಳ್ಳಿ ಕೃಷ್ಣೇಗೌಡ, ಶೇಖರ್, ಮೋಹನ್, ಶೇಖರ್ ರಾಘು, ವಿಜಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಟಿ.ಮಂಜು
  • ಹೋಬಳಿಯ ಗಡಿಭಾಗದ ಡಾಣನಹಳ್ಳಿ
ಕಿಕ್ಕೇರಿ: ಸಾರಿಗೆ ಸಂಪರ್ಕ ಗ್ರಾಮಾಭಿವೃದ್ಧಿಗೆ ಸಹಕಾರಿಯಾಗಲಿದ್ದು, ಸಾರಿಗೆ ಸೌಲಭ್ಯವನ್ನು ನಾಗರಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಎಚ್.ಟಿ.ಮಂಜು ಸಲಹೆ ನೀಡಿದರು.
ಹೋಬಳಿಯ ಗಡಿಭಾಗದ ಡಾಣನಹಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಸಂಚಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಖಾಸಗಿ ವಾಹನಗಳಲ್ಲಿ ನಾಗರಿಕರು ಓಡಾಡದೆ ಸಾರಿಗೆ ಬಸ್‌ನಲ್ಲಿ ಓಡಾಡಬೇಕು. ಆ ಮೂಲಕ ಇಲಾಖೆಗೆ ನಷ್ಟವಾಗದಂತೆ ಸಹಕರಿಸುವುದು ಗ್ರಾಮಸ್ಥರ ಕರ್ತವ್ಯ ಎಂದರು.
ಹೊಳೆನರಸೀಪುರ ಡಿಪೋದಿಂದ ಬೆಳಗ್ಗೆ 8ಕ್ಕೆ ಹಾಗೂ ಸಂಜೆ ಕೆ.ಆರ್.ಪೇಟೆ ಬಸ್ ಡಿಪೋನಿಂದ 4 ಗಂಟೆಗೆ ನಿತ್ಯ ಈ ಬಸ್ ಕಿಕ್ಕೇರಿ, ಬಿದರಹಳ್ಳಿ ಮಾರ್ಗವಾಗಿ ಡಾಣನಹಳ್ಳಿ ಗ್ರಾಮಕ್ಕೆ ಬರಲಿದೆ. ಅಲ್ಲದೆ ತ್ವರಿತವಾಗಿ ಇಲ್ಲಿನ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಇದರೊಂದಿಗೆ ಗ್ರಾಮದ ಶಾಲೆ ಅಭಿವೃದ್ಧಿಗೆ 5ಲಕ್ಷ ರೂ. ಅನುದಾನ, ಗ್ರಾಮಕ್ಕೆ ಹೈಮಾಸ್ಟ್ ವಿದ್ಯುತ್‌ದೀಪ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಹರೀಶ್, ಶೇಖರ್, ಶೇಖರ್, ರಘು, ವಿಜಿ, ಮೋಹನ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net