ಈ ವರ್ಷ ಜಿಲ್ಲೆಗೆ ಅಗತ್ಯವಿರುವ ನೀರಿನ ಪ್ರಮಾಣ ಲಭ್ಯವಿದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಬೆಳೆ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ತಹಸೀಲ್ದಾರ್‌ಗಳು ವಿಶೇಷ ಮುತುವರ್ಜಿ ವಹಿಸಿ ಕೆರೆಗಳನ್ನು ತೆರವುಗೊಳಿಸಿ, ನಂತರ ಮತ್ತೆ ಒತ್ತುವರಿಯಾಗದಂತೆ ತಂತಿ ಬೇಲಿ ಮತ್ತು ಸೂಚನಾ ಫಲಕ ಅಳವಡಿಸಿ. ಜಿಲ್ಲೆಯಲ್ಲಿ ಇದುವರೆಗೆ 232 ಗ್ರಾಮ ಪಂಚಾಯಿತಿಗಳಲ್ಲಿ ಪೌತಿ ಖಾತಾ ಆಂದೋಲನ ನಡೆಸಿ 6,76,59 ಅರ್ಜಿ ವಿಲೇವಾರಿ ಮಾಡಲಾಗಿದೆ. ಪಿ.ಎಂ ಕಿಸಾನ್ ಯೋಜನೆಯಡಿ 21 ಕಂತುಗಳಲ್ಲಿ 892.08 ಕೋಟಿ ರೂ ನೀಡಲಾಗಿದೆ ಎಂದರು.