ಅಭಿವೃದ್ಧಿಗೆ ಮುನ್ನುಡಿ ಬರೆದವರು ಪ್ರಧಾನಿ ಮೋದಿ

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ 12 ವರ್ಷ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ಹೊರವಲಯದ ಕಾಳಿಕಾದೇವಿ ದೇವಸ್ಥಾನಲ್ಲಿ ತಾಲೂಕು ಬಿಜೆಪಿ ಮಂಡಲದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಮಧುಗಂಗಾಧರ,  ಎಚ್.ಆರ್ ಅಶೋಕ್‌ಕುಮಾರ್, ಯಮದೂರು ಸಿದ್ದರಾಜು, ಶಿವಲಿಂಗಸ್ವಾಮಿ, ಕೆ.ಸಿ ನಾಗೇಗೌಡ, ಅಶೋಕ್, ರಾಮಣ್ಣ, ಚಿಕ್ಕಣ್ಣ, ಮಹೇಶ್, ಬಸವರಾಜು, ದೇವರಾಜು, ಕಾಂತರಾಜು, ಪ್ರಸಾದ್, ರವಿ ಇದ್ದರು.

Published on
ಮಳವಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸುಭದ್ರ ಆಡಳಿತಾದಿಂದಾಗಿ ಅರ್ಥಿಕತೆ ತಂತ್ರಜ್ಞಾನ, ಮೂಲಸೌಕರ್ಯ ಜತೆಗೆ ಸಾಮಾಜಿಕ ಕಲ್ಯಾಣ ಯೋಜನೆಗಳ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಧುಗಂಗಾಧರ್ ತಿಳಿಸಿದರು.
ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ 12 ವರ್ಷ ಅವಧಿ ಪೂರೈಸಿ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಕಾಳಿಕಾದೇವಿ ದೇವಸ್ಥಾನಲ್ಲಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.
ನರೇಂದ್ರ ಮೋದಿ ಪ್ರಧಾನಿಯಾಗಿ 4399 ದಿನಗಳನ್ನು ಪೂರೈಸುವುದರ ಮೂಲಕ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ದಾಖಲೆ ಹಿಂದಿಕ್ಕಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲಿ ದೇಶದ ಪ್ರತಿಯೊಬ್ಬರೂ ಬ್ಯಾಂಕಿಂಗ್ ವಹಿವಾಟು ನಡೆಸಬೇಕೆಂದು ಪ್ರಧಾನಮಂತ್ರಿ ಜನಧನ್ ಯೋಜನೆ, ಒಂದು ದೇಶ ಒಂದು ತೆರಿಗೆ ನೀತಿಯಡಿ ಜಿಎಸ್‌ಟಿ ಜಾರಿ ಹಾಗೂ ಭಾರತವು ವಿಶ್ವದ ಅತಿ ದೊಡ್ಡ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ 5ನೇ ಸ್ಥಾನಕೇರಲು ಮೋದಿ ಅವರ ಅರ್ಥಿಕ ನೀತಿ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಉಜ್ವಲ ಯೋಜನೆ, ಸ್ವಚ್ಛಭಾರತ ಮೀಷನ್, ಜಲಜೀವನ್ ಮೀಷನ್, ಪಿಎಂ ಕಿಸಾನ್‌ಸಮ್ಮಾನ್ ನಿಧಿ, ಐಐಟಿ, ಐಐಎಂ ಮತ್ತು ವೈದ್ಯಕೀಯ ಸೀಟುಗಳ ಹೆಚ್ಚಳದ ಜತೆಗೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370 ವಿಧಿಯನ್ನು ರದ್ದು ಹಾಗೂ ತ್ರಿವಳಿ ತಲಾಕ್ ನಿಷೇಧ ಮಾಡಿರುವುದು ಮೋದಿ ಸರ್ಕಾರದ ಸಾಧನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರೈತ ಮೊರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್. ಅಶೋಕ್‌ಕುಮಾರ್ ಮಾತನಾಡಿ, ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿರುವುದು ನಮ್ಮೇಲ್ಲರ ಸೌಭಾಗ್ಯ. ಅವರ ಆಡಳಿತದಲ್ಲಿ ದೇಶದ ಪ್ರಗತಿ ಕಂಡಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ರೈತ ಮೊರ್ಚಾ ಉಪಾಧ್ಯಕ್ಷ ಯಮದೂರು ಸಿದ್ದರಾಜು, ಮುಖಂಡರಾದ ಶಿವಲಿಂಗಸ್ವಾಮಿ, ಕೆ.ಸಿ.ನಾಗೇಗೌಡ, ಅಶೋಕ್, ರಾಮಣ್ಣ, ಚಿಕ್ಕಣ್ಣ, ಮಹೇಶ್, ಬಸವರಾಜು, ದೇವರಾಜು, ಕಾಂತರಾಜು, ಪ್ರಸಾದ್, ರವಿ ಸೇರಿದಂತೆ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net