ನರರೋಗ ತಜ್ಞ ಡಾ.ಎ.ಆರ್.ಮಕ್ಸೂದ್ ಅಹಮದ್ ಮಾತನಾಡಿ, ತಲೆಗೆ ತೀವ್ರ ತರನಾದ ಪೆಟ್ಟಾದಾಗ ನಿರ್ಲಕ್ಷಿಸದೇ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ. ಮೊದಲ ಎರಡು ಗಂಟೆಯಲ್ಲಿ ರೋಗಿಯ ಸ್ಥಿತಿ ಅವಲೋಕಿಸಿ ಆರಂಭಿಕ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಎರಡನೇ ಹಂತದ ಬ್ರೈನ್ ಡ್ಯಾಮೇಜ್‌ಗೆ ಬಿಇ-ಎಫ್‌ಎಎಸ್‌ಟಿ ವಿಧಾನದ ಮೂಲಕ ತುರ್ತು ಚಿಕಿತ್ಸೆಯ ಅವಶ್ಯಕತೆ ಅರಿತು, ದೇಹದ ಸ್ಥಿರತೆ, ಕಣ್ಣೋಟ, ಮುಖ ಭಾಗದಲ್ಲಿ ಸೆಳೆತ, ಅಂಗಾಂಗಗಳ ನಡಗುವಿಕೆ, ತೊದಲುವಿಕೆಗಳನ್ನು ಉತ್ತಮ ಚಿಕಿತ್ಸೆ ನೀಡಿ ಉಪಚರಿಸಬಹುದಾಗಿದೆ. ಜೀವನ ಶೈಲಿ ಹಾಗೂ ಧೂಮಪಾನ, ಮದ್ಯಪಾನ ಹಾಗೂ ಇತರೆ ದುಶ್ಚಟ ಮತ್ತು ರಸ್ತೆ ಅಪಘಾತಗಳ ಸಂದರ್ಭದಲ್ಲಿ ಉಂಟಾಗುವ ತೀವ್ರ ತರದ ತಲೆ ಪೆಟ್ಟುಗಳ ಬಗ್ಗೆ ನಿರ್ಲಕ್ಷೃ ಬೇಡ ಎಂದರು.