ಮಾ.25ರಂದು ಸಹಕಾರ ಪ್ರಶಸ್ತಿ ಪ್ರದಾನ ಸಮಾರಂಭ: ಕರ್ನಾಟಕ ಸಂಘದ ಕಾರ್ಯದರ್ಶಿ ಪಿ.ಲೋಕೇಶ್ ಹೇಳಿಕೆ

ಮಂಡ್ಯದಲ್ಲಿ ಸಹಕಾರ ಪ್ರಶಸ್ತಿ ಪ್ರದಾನ ಸಮಾರಂಭ ಕುರಿತು ಕರ್ನಾಟಕ ಸಂಘದಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.
ಮಂಡ್ಯದಲ್ಲಿ ಸಹಕಾರ ಪ್ರಶಸ್ತಿ ಪ್ರದಾನ ಸಮಾರಂಭ ಕುರಿತು ಕರ್ನಾಟಕ ಸಂಘದಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಜಿಲ್ಲೆಯ ಸಹಕಾರಿ ಕೆ.ಲಲಿತಾ ಆಯ್ಕೆ
  • ಪ್ರಶಸ್ತಿ ಫಲಕದೊಂದಿಗೆ 25 ಸಾವಿರ ರೂ ನಗದು ನೀಡಿ ಗೌರವ
ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಜಿ.ಎಸ್.ಬೊಮ್ಮೇಗೌಡ ಸಹಕಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ.25ರಂದು ಬೆಳಗ್ಗೆ 11 ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಪಿ.ಲೋಕೇಶ್ ಚಂದಗಾಲು ತಿಳಿಸಿದರು.
ಪ್ರಶಸ್ತಿಗೆ ಮೈಸೂರು ಜಿಲ್ಲೆಯ ಸಹಕಾರಿ ಮಹಿಳೆ ಕೆ.ಲಲಿತಾ ಅವರನ್ನು ಆಯ್ಕೆ ಮಾಡಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಫಲಕದೊಂದಿಗೆ 25 ಸಾವಿರ ರೂ ನಗದು ನೀಡಿ ಗೌರವಿಸಲಾಗುವುದು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆಯಲ್ಲಿ ಮೈಸೂರು ವಿವಿಯ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಕೆ.ಟಿ.ವೀರಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಮಾಜಿ ಶಾಸಕ ಹಾಗೂ ದತ್ತಿದಾನಿ ಜಿ.ಬಿ.ಶಿವಕುಮಾರ್ ಉಪಸ್ಥಿತರಿರುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಮಾಜಿ ಶಾಸಕ ಜಿ.ಬಿ.ಶಿವಮಾರ್, ಜೆ.ರಾಜಶೇಖರ, ಸುರೇಶ್, ಉದಯ್‌ಶಂಕರ್ ಇದ್ದರು.

21ರಂದು ಮಹಿಳಾ ದಿನಾಚರಣೆ
ಸಂಘದ ಮಹಿಳಾಧ್ಯಕ್ಷೆ ನಾಗರೇವಕ್ಕ ಮಾತನಾಡಿ, ಸಂಘದ ಮಹಿಳಾ ಘಟಕದ ವತಿಯಿಂದ ಮಾ.21ರಂದು ಬೆಳಗ್ಗೆ 10.30ಕ್ಕೆ ಮಹಿಳಾ ದಿನಾಚರಣೆ ಅಂಗವಾಗಿ ಪೂರಕ ಕಾರ್ಯಕ್ರಮವನ್ನು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದರು.


ಮಹಿಳಾ ದೌರ್ಜನ್ಯ ವಿರೋಧಿಸಿ ಆಯೋಜಿಸಿರುವ ಜಾಥಾಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತು ವೀಣಾ ದಂಪತಿ ಚಾಲನೆ ನೀಡುವರು. ಹೋರಾಟದ ಹಾಡುಗಳು ಗಾಯನಕ್ಕೆ ಕೆ.ಎಸ್.ಮಂಜುಳಾ ಮತ್ತು ಡಾ.ಬಿ.ಜಯಪ್ರಕಾಶಗೌಡ ಚಾಲನೆ ನೀಡುವರು. ಮಹಿಳಾ ಮುನ್ನಡೆ ಸಂಘಟನೆಯಿಂದ ಮಹಿಳಾ ಜನಜಾಗೃತಿ ಬೀದಿ ನಾಟಕ, ಮಹಿಳಾ ಸಬಲೀಕರಣ ವರ್ತಮಾನದ ಚಿಂತನೆ ಸಂಬಂಧ ವಿಶ್ರಾಂತ ಪ್ರಾಂಶುಪಾಲ ಡಾ.ಮಾ.ರಾಮಕೃಷ್ಣ ಹಾಗೂ ವೀಣಾ ರಾಮಕೃಷ್ಣ ದಂಪತಿ ಸಂವಾದ ನಡೆಸುವರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net