ಮಾ.21ರಂದು ಅಟ್ಟುಣ್ಣುವ ಜಾತ್ರಾ ಮಹೋತ್ಸವ: ಭೂಮಿ ಸಿದ್ದೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಸಿದ್ದರಾಜು ಮಾಹಿತಿ
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭೂಮಿ ಸಿದ್ದೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಸಿದ್ದರಾಜು ಮಾತನಾಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂತೆಕಸಲಗೆರೆ ಗ್ರಾಮದಲ್ಲಿ ಜಾತ್ರೆ
35 ರಿಂದ 40 ಸಾವಿರ ಭಕ್ತರು ಭಾಗಿ
ಮಂಡ್ಯ: ತಾಲೂಕಿನ ಕೊತ್ತತ್ತಿ ಹೋಬಳಿ ಸಂತೆಕಸಲಗೆರೆ ಗ್ರಾಮದ ಭೂಮಿ ಸಿದ್ದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾ.21ರಂದು ಅಟ್ಟುಣ್ಣುವ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಭೂಮಿ ಸಿದ್ದೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಸಿದ್ದರಾಜು ತಿಳಿಸಿದರು.
ಪ್ರತಿವರ್ಷ ಯುಗಾದಿ ಹಬ್ಬದ 2ನೇ ದಿನದಂದು ಕೊತ್ತತ್ತಿ, ಸಂತೆಕಸಲಗೆರೆ, ಕಾರಸವಾಡಿ, ಮೊತ್ತಹಳ್ಳಿ, ಮಂಗಲ, ಹನಿಯಂಬಾಡಿ ಮತ್ತು ಬೇವಿನಹಳ್ಳಿ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವರು. ಅಂತೆಯೇ ಬಾಯಿಬೀಗ, ಸೇವಾಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯುಗಾದಿ ಹಬ್ಬದ 3ನೇ ದಿನ 35 ರಿಂದ 40 ಸಾವಿರ ಭಕ್ತರು ದೇವಾಲಯದ ಸುತ್ತಮುತ್ತ ಮಾಂಸಾಹಾರದ ಅಟ್ಟುಣ್ಣುವ ಜಾತ್ರೆ ನಡೆಸಲಿದ್ದಾರೆ. ಭಕ್ತರು ಸ್ವತಃ ತಾವೇ ಅಡುಗೆ ತಯಾರಿಸಿ ಅವರ ಗ್ರಾಮಗಳಿಂದ ಬರುವ ದಾಸಪ್ಪ ಅವರು ತರುವ ದೃಷ್ಟಿಮುಖ ದೇವರ ಮುಂದೆ ಎಡೆ ನೀಡಿ ಪೂಜೆ ಸಲ್ಲಿಸಿದ ನಂತರ ಜಾತ್ರೆಯಲ್ಲಿ ಭಾಗವಹಿಸುವ ತಮ್ಮ ಕುಲದವರಿಗೆ ಪ್ರಸಾದ ರೂಪದಲ್ಲಿ ಉಣಬಡಿಸುತ್ತಾರೆ. ಜಾತ್ರಾ ಮಹೋತ್ಸವ ಮುಗಿದ ನಂತರ ದೇವಾಲಯದ ರಾಜಗೋಪುರ ನಿರ್ಮಾಣ ಕಾರ್ಯ ನಡೆಯಲಿದೆ. ಇದಕ್ಕೆ 4 ರಿಂದ 5 ಕೋಟಿ ರೂ ಅವಶ್ಯಕತೆಯಿದ್ದು, ಭಕ್ತರು ದೇಣಿಗೆ ನೀಡುವಂತೆ ಮನವಿ ಮಾಡಿದರು.
ಸಮಿತಿ ಉಪಾಧ್ಯಕ್ಷ ಎಸ್.ಕೆಂಪೇಗೌಡ, ಕಾರ್ಯದರ್ಶಿ ಕೆಂಪಸಿದ್ದೇಗೌಡ, ಜಂಟಿ ಕಾರ್ಯದರ್ಶಿ ಬಸವರಾಜು, ಖಜಾಂಚಿ ಕೆ.ಟಿ.ಜಗದೀಶ್, ಅಶೋಕ್, ಮೋಹನ್ ಇದ್ದರು.