ಫೆ.21ರಂದು ರಾತ್ರಿ 9ಕ್ಕೆ ಸಂಸಾರ ಸಂದನ ಸಾಮಾಜಿಕ ನಾಟಕ ಪ್ರದರ್ಶನ
ಮಂಡ್ಯ: ಮದ್ದೂರು ತಾಲೂಕು ಸಬ್ಬನಹಳ್ಳಿ ಗ್ರಾಮದ ಶ್ರೀ ಸೀತಾಳಲಿಂಗೇಶ್ವರಸ್ವಾಮಿ ರಥೋತ್ಸವವು ಫೆ.20ರಂದು ಬೆಳಗ್ಗೆ 8.30ಕ್ಕೆ ಗ್ರಾಮದ ಶ್ರೀ ಮಂಚಮ್ಮನ ದೇವಸ್ಥಾನದಿಂದ ಸೀತಾಳಲಿಂಗೇಶ್ವರ ಸ್ವಾಮಿಯ ಸನ್ನಿಧಿವರೆಗೆ ಬಾಯಿ ಬೀಗ, ದೇವರ ಪೂಜೆ ಸಮೇತ ನಡೆಯಲಿದೆ ಎಂದು ಸೀತಾಳಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಕೆ.ಪುಟ್ಟರಾಜು ತಿಳಿಸಿದರು.
17ರಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕೈಕರ್ಯಗಳು ಆರಂಭಗೊಂಡಿದ್ದು, ಫೆ.21ರವರೆಗೆ ಮುಂದುವರೆಯಲಿವೆ. 20ರಂದು ರಥೋತ್ಸವದ ನಂತರ ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಮಹಾಮಂಗಳಾರತಿ ರಾತ್ರಿ 9ಕ್ಕೆ ಶನಿಪ್ರಭಾವ ಪೌರಾಣಿಕ ನಾಟಕ ನಡೆಯಲಿದೆ. 21ರಂದು ಬೆಳಗ್ಗೆ 5 ಗಂಟೆಗೆ ಪಟ್ಟಲದಮ್ಮ ಅಮ್ಮನವರಿಗೆ ಮಡೇ ಆರತಿ ಹಾಗೂ ಪೂಜೆ ನೆರವೇರಲಿದೆ. ರಾತ್ರಿ 9ಕ್ಕೆ ಸಂಸಾರ ಸಂದನ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ದೇವರಿಗೆ ಹರಕೆ ಮತ್ತು ಕಾಣಿಕೆಗಳನ್ನು ನೀಡಿದವರು ಟ್ರಸ್ಟ್‌ನ ರಸೀದಿ ಪಡೆಯಬಹುದಾಗಿದೆ. ದೇವಾಲಯದ ಆವರಣದಲ್ಲಿ ಬಸವ ಭವನ ಮತ್ತು ಬಸವರಥಕ್ಕೆ ಧನಸಹಾಯ ಮಾಡುವವರು ಟ್ರಸ್ಟ್ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಟ್ರಸ್ಟ್‌ನ ಅಧ್ಯಕ್ಷ ನಾಡಗೌಡ ಮಂಚೇಗೌಡ, ಗೌರವಾಧ್ಯಕ್ಷ ಎಂ.ಪುಟ್ಟೇಗೌಡ, ಖಜಾಂಚಿ ಎಸ್.ಎಂ.ಮಂಚಲಿಂಗೇಗೌಡ, ಎಂ.ಬಲ್ಲೇಗೌಡ, ಹೊನ್ನೇಗೌಡ ಇದ್ದರು.