2023ರಲ್ಲಿ ನಿಯಮ ಬಾಹಿರವಾಗಿ ಭ್ರೂಣ ಪರೀಕ್ಷೆ ತಡೆಯಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಿರ್ಮಿಸಲಾದ ಪಿಸಿಟಿಎನ್‌ಡಿಟಿ ಕಾಯ್ದೆ ಅನುಷ್ಠಾನ ಸಮಿತಿ ನಿಷ್ಕ್ರಿಯವಾಗಿದ್ದು, ಅದನ್ನು ರದ್ದು ಪಡಿಸಬೇಕು. ಜಿಲ್ಲೆಯ ಬಹುತೇಕ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸ್ಕಾೃನಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ ಅದನ್ನು ನಿರ್ವಹಿಸಲು ರೆಡಿಯಾಲಜಿಸ್ಟ್‌ಗಳನ್ನು ನೇಮಕ ಮಾಡಿಲ್ಲ. ಸರ್ಕಾರಿ ವೈದ್ಯರು ಖಾಸಗಿ ಪ್ರಯೋಗಾಲಯಗಳಲ್ಲಿ ಹೂಡಿಕೆ ಮಾಡಿರುವ ಕಾರಣ ರೇಡಿಯಾಲಜಿಸ್ಟ್‌ಗಳ ನೇಮಕ ಮಾಡದಿರಲು ಕಾರಣವಾಗಿದೆ ಎಂದು ಆರೋಪಿಸಿದರು.