ಬಾಕಿ ಬಿಲ್ ರಾಜ್ಯಸರ್ಕಾರವೇ ಭರಿಸಲಿ: ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಆಗ್ರಹ

 ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿದರು.
Published on
ಮಂಡ್ಯ: ರಾಜ್ಯದ ಗ್ರಾಮ ಪಂಚಾಯಿತಿಯಲ್ಲಿನ ಕುಡಿಯುವ ನೀರು ಸರಬರಾಜು ಘಟಕ ಮತ್ತು ಬೀದಿ ದೀಪಗಳ ವಿದ್ಯುತ್ ಬಿಲ್ ಬಾಕಿಯನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದರು.
ಗ್ರಾ.ಪಂಗಳಲ್ಲಿ 2015ರಿಂದ 2023ರವರೆಗೆ ಬಾಕಿ ಇರುವ ಎಸ್ಕಾಂ ಬಾಕಿಯನ್ನು 2024ರ ಖಾತರೀಕರಣದ ಮೂಲಕ ತಿರುವಳಿ ಮಾಡುವಂತೆ ಹಣಕಾಸು ಆಯೋಗ ಆದೇಶ ನೀಡಿದೆ. ಆದರೂ ಜಿ.ಪಂ ಇದರ ಇತ್ಯರ್ಥಕ್ಕೆ ಮುಂದಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗ್ರಾಮಗಳಿಗೆ ಕುಡಿಯುವ ನೀರಿನ ಕೊಳವೆಬಾವಿ ಕೊರೆಸಿದ ಜಿ.ಪಂ ವಿದ್ಯುತ್ ಸಂಪರ್ಕ ಮಾಡಿಸಿಕೊಂಡು ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುತ್ತಿದೆ. ಆದರೆ ವಿದ್ಯುತ್ ಜಾಗೃತ ದಳದವರು ಗ್ರಾ.ಪಂಗಳಿಗೆ ದಂಡ ವಿಧಿಸಿದ್ದಾರೆ. ಅಲ್ಲದೆ, ವಿದ್ಯುತ್ ಸರಬರಾಜು ಕಂಪನಿಗಳು, ನೀರು ಪೂರೈಕೆ ಮಾಡಲು ಹಾಗೂ ಬೀದಿ ದೀಪಗಳಿಗೆ ಯಾವುದೇ ಮೀಟರ್ ಅಳವಡಿಕೆ ಮಾಡದೇ ಬಿಲ್ ಹೊರಿಸುತ್ತಿದ್ದಾರೆ. ಜತೆಗೆ ಈಗ ಎಲ್‌ಇಡಿ ಬೀದಿದೀಪಗಳ ಅಳವಡಿಕೆಯಿದ್ದರೂ, ಹಾಲೋಜಿನ್‌ಗೆ ಹಾಕುತ್ತಿದ್ದ ಮೊತ್ತದ ಶುಲ್ಕವನ್ನು ಸರಾಸರಿ ಆಧಾರದ ಮೇಲೆ ವಿಧಿಸುತ್ತಿದ್ದಾರೆ ಎಂದು ಖಂಡಿಸಿದರು.
ಜಿ.ಪಂ ಸಿಇಒ ಅವರು ಸೆಸ್ಕ್ ಅಧಿಕಾರಿಗಳ ಜತೆ ಕುಳಿತು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ನೀರು ಸರಬರಾಜು ಯೋಜನೆಗಳ ಸ್ಥಾವರ, ಬೀದಿ ದೀಪಗಳಿಗೆ ಮೀಟರ್ ಅಳವಡಿಸಬೇಕು. ಬೆಳಗಾವಿ ಜಿ.ಪಂನಂತೆ ಇಂಧನ ಲೆಕ್ಕಪರಿಶೋಧನೆ ಮಾದರಿ ಹಾಗೂ ದಾವಣಗೆರೆ ಜಿ.ಪಂ, ಹೊನ್ನಾಳಿ ತಾಲೂಕು ಸಮನ್ವಯ ಮಾದರಿಯ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್, ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್, ಎಂ.ಚಾಮರಾಜು, ಎಸ್.ಸುವರ್ಣ, ಅರ್ಪಿತಾ, ಕೆಂಪರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net