ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯಲಿ: ಗ್ರಾ.ಪಂ ಸದಸ್ಯರ ಮಹಾಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್ ಉಪ್ಪರಕನಹಳ್ಳಿ ಆಗ್ರಹ
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರ ಮಹಾಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್ ಉಪ್ಪರಕನಹಳ್ಳಿ ಮಾತನಾಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಧಿಕಾರ ಮುಗಿಯುತ್ತಿರುವ ಗ್ರಾಪಂಗೆ ಆಡಳಿತಾಧಿಕಾರಿ ನೇಮಕ
ಜಿಲ್ಲಾಧಿಕಾರಿಗೆ ರಾಜ್ಯಸರ್ಕಾರದಿಂದ ಆದೇಶ
ಗ್ರಾಪಂ ಸದಸ್ಯರನ್ನೇ ಮುಂದುವರೆಸುವಂತೆ ಆಗ್ರಹ
ಮಂಡ್ಯ: ಅಧಿಕಾರ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗೆ ನೀಡಿರುವ ಆದೇಶ ಹಿಂಪಡೆಯಬೇಕು ಎಂದು ಗ್ರಾ.ಪಂ ಸದಸ್ಯರ ಮಹಾಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್ ಉಪ್ಪರಕನಹಳ್ಳಿ ಆಗ್ರಹಿಸಿದರು.
ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಜ.16ರಂದು ಸರ್ಕಾರ ಆದೇಶ ನೀಡಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗೆ ಅವಕಾಶ ನೀಡದೇ ಅಧಿಕಾರಿಗಳಿಗೆ ಆಡಳಿತ ನೀಡುವ ಅವಕಾಶವಾಗಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತ್ ರಾಜ್ ಅಧಿನಿಯಮದ 1993ರ ಪ್ರಕರಣ 8(1)ಬಿ ಅನ್ವಯ ಚುನಾಯಿತರಾಗಲು ಅರ್ಹರಾದ ವ್ಯಕ್ತಿಗಳನ್ನು ಒಳಗೊಂಡ ಆಡಳಿತ ಸಮಿತಿ ನೇಮಿಸಲು ಅವಕಾಶವಿದೆ. 2020ರ ಕೋವಿಡ್ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಹಾಲಿ ಆಡಳಿತ ಮಂಡಳಿಯನ್ನು ಮುಂದುವರೆಸಲು ಅಂದಿನ ಸರ್ಕಾರವನ್ನು ಒತ್ತಾಯಿಸಿದ್ದರು. 90 ದಶಕದಲ್ಲೂ ಹಾಲಿ ಆಡಳಿತ ಮಂಡಳಿ ನೇಮಿಸಿರುವ ಉದಾಹರಣೆಗಳಿವೆ. ಆದ್ದರಿಂದ ರಾಜ್ಯ ಸರ್ಕಾರವು ಹಿಂದಿನ ಪ್ರಕರಣ ಪರಿಗಣಿಸಿ ಗ್ರಾ.ಪಂಗಳಿಗೆ ಆಡಳಿತಾಧಿಕಾರಿ ನೇಮಿಸುವ ಆದೇಶ ಹಿಂಪಡೆದು, ಆಡಳಿತಾವಧಿ ಕೊನೆಗೊಳ್ಳುತ್ತಿರುವ ಹಾಲಿ ಆಡಳಿತ ಸಮಿತಿಯನ್ನು ಕಾಯ್ದೆಯ ಅನ್ವಯ ಪುನರ್ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಬಿ.ಕೆ.ಕೆಂಪೇಗೌಡ, ಮಹೇಶ್, ಸುವರ್ಣವತಿ, ಪ್ರದೀಪ್ ಸಿದ್ದೇಗೌಡ, ಇದ್ದರು.