ವಿಶ್ವಕರ್ಮ ಮಹಾಸಭಾಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ

ಮಳವಳ್ಳಿ ತಾಲೂಕಿನ ಮಿಕ್ಕೆರೆ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಮಹಾಸಭಾ ಸಭೆಯಲ್ಲಿ  ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು.  ನಂದೀಶ್, ಪ್ರದೀಪ್, ಹರಕೇಶ್, ಪ್ರಕಾಶ್, ಕಾಂತರಾಜು, ಪುಟ್ಟಸ್ವಾಮಾಚಾರ್, ಗೋವಿಂದಾಚಾರ್, ಮಂಟೇಸ್ವಾಮಿ ಪೂರಿಗಾಲಿ ಇತರರು ಇದ್ದರು.
ಮಳವಳ್ಳಿ ತಾಲೂಕಿನ ಮಿಕ್ಕೆರೆ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಮಹಾಸಭಾ ಸಭೆಯಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು. ನಂದೀಶ್, ಪ್ರದೀಪ್, ಹರಕೇಶ್, ಪ್ರಕಾಶ್, ಕಾಂತರಾಜು, ಪುಟ್ಟಸ್ವಾಮಾಚಾರ್, ಗೋವಿಂದಾಚಾರ್, ಮಂಟೇಸ್ವಾಮಿ ಪೂರಿಗಾಲಿ ಇತರರು ಇದ್ದರು.
Published on
ಮಳವಳ್ಳಿ : ತಾಲೂಕಿನ ವಿಶ್ವಕರ್ಮ ಮಹಾಸಭಾ ಕಿರುಗಾವಲು ಹೋಬಳಿ ಘಟಕಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಯಿತು.
ತಾಲೂಕಿನ ಮಿಕ್ಕೆರೆ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷರಾಗಿ ನಂದೀಶ್ ಮತ್ತು ಉಪಾಧ್ಯಕ್ಷರಾಗಿ ಪ್ರದೀಪ್, ಕಾರ್ಯದರ್ಶಿ ಹರಕೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ನಂದೀಶ್ ಮಾತನಾಡಿ, ನನಗೆ ಸಿಕ್ಕಿರುವುದು ಪದವಿಯಲ್ಲ, ಇದು ಜವಾಬ್ದಾರಿ ಎಂದು ಭಾವಿಸುತ್ತೇನೆ. ವಿಶ್ವಕರ್ಮ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾವು ಸೃಷ್ಟಿಕರ್ತ ವಿಶ್ವಕರ್ಮರ ವಂಶಸ್ಥರು. ಆದರೆ ಇಂದು ನಮ್ಮ ಸಮಾಜ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. ಇದನ್ನು ಸರಿಪಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಿರುಗಾವಲು ಹೋಬಳಿಯ ಪ್ರತಿ ಗ್ರಾಮದಲ್ಲೂ ವಿಶ್ವಕರ್ಮ ಸಮಾಜದ ಮನೆ ಮನೆಗೆ ತೆರಳಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಕ್ಕೆ ಕರೆತರುವ ಮೂಲಕ ಸಂಘಟನೆ ಬಲಪಡಿಸುತ್ತೇನೆ ಎಂದರು. ನಮ್ಮ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವಿದ್ಯಾರ್ಥಿ ವೇತನ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮದಿಂದ ಸಿಗುವ ಸಾಲ ಸೌಲಭ್ಯ ಹಾಗೂ ಸರ್ಕಾರದ ಯೋಜನೆಗಳನ್ನು ನಮ್ಮ ಜನರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸಮಾಜದ ಮುಖಂಡರು ಅಭಿನಂದಿಸಿದರು. ಜಿಲ್ಲಾ ಪ್ರಭಾರ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಕಾಂತರಾಜು, ಚಾಮಾಚಾರಿ, ಪುಟ್ಟಸ್ವಾಮಾಚಾರ್, ನಿಂಗಾಚಾರಿ, ಮಂಟೇಸ್ವಾಮಿ ಪೂರಿಗಾಲಿ ಸೇರಿದಂತೆ ಸಮಾಜದ ಹಲವು ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net