ಮೇಲುಕೋಟೆ ಕಲ್ಯಾಣ, ಬಸ್ ನಿಲ್ದಾಣ, ದೇವಾಲಯದ ಬಳಿ ಬಯೋ ಶೌಚಗೃಹ ನಿರ್ಮಿಸಬೇಕು. ರಸ್ತೆಗಳ ದುರಸ್ತಿ ಮಾಡಿಸಬೇಕು. ವಿವಿಧ ತಾಲೂಕಿನಿಂದ ಬರುವ ಸಾರ್ವಜನಿಕರಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ. ಪಾರ್ಕಿಂಗ್‌ನಿಂದ ದೇವಾಲಯಕ್ಕೆ ಭಕ್ತರು ಸಂಚರಿಸಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ. ಮಂಗಳವಾದ್ಯ, ನಾದ ಸ್ವರ ಹಾಗೂ ವಿವಿಧ ಕಲಾ ತಂಡಗಳನ್ನು ವೈರಮುಡಿ ಬ್ರಹ್ಮೋತ್ಸವದಲ್ಲಿ ನಿಯೋಜಿಸಿ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ವೈರಮುಡಿ ಬ್ರಹ್ಮೋತ್ಸವ ಪ್ರಾರಂಭವಾಗಿ ಮುಗಿಯುವವರೆಗೂ ನಿರಂತರ ವಿದ್ಯುತ್ ಪೂರೈಕೆ ಮಾಡಿ. ಬೀದಿ ದೀಪಗಳ ದುರಸ್ತಿಗೊಳಿಸಿ. ಚೆಲುವನಾರಾಯಣಸ್ವಾಮಿ ದೇವಾಲಯ, ಯೋಗ ನರಸಿಂಹ ಸ್ವಾಮಿ ದೇವಾಲಯ ಹಾಗೂ ದೇವಾಲಯದ ವ್ಯಾಪ್ತಿಯ ಪ್ರಮುಖ ಮಂಟಪ, ಕಲ್ಯಾಣಿಯಲ್ಲಿ ವಿಶೇಷ ದೀಪಾಲಂಕಾರ ಮತ್ತು ಹೂವಿನ ಅಲಂಕಾರ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.