ನವೋದಯ ಪರೀಕ್ಷೆಯಲ್ಲಿ ಪ್ರತೀಕ್ಷಾ ಪಾಸ್

ಟಿ.ಎಚ್.ಪ್ರತೀಕ್ಷ
ಟಿ.ಎಚ್.ಪ್ರತೀಕ್ಷ
Published on
ಮಳವಳ್ಳಿ : ತಾಲೂಕಿನ ತಳಗವಾದಿ ಏಕಲವ್ಯ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನವೋದಯ(ಜೆಎನ್‌ವಿಎಸ್ ಟಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ.
ಗ್ರಾಮದ ಟಿ.ಜೆ.ಹನುಮಂತು ಮತ್ತು ಅನಿತಾ ದಂಪತಿಯ ಪುತ್ರಿ ಟಿ.ಎಚ್.ಪ್ರತೀಕ್ಷಾ ನವೋದಯ ಪ್ರವೇಶಾತಿ ಫಲಿತಾಂಶದಲ್ಲಿ ಉತ್ತೀರ್ಣಳಾಗಿದ್ದಾಳೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಉಚಿತ ವಸತಿ ಶಿಕ್ಷಣ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಜವಾಹರ್ ನವೋದಯ ವಿದ್ಯಾಲಯಗಳಿಗೆ ಪ್ರವೇಶಾತಿಗಾಗಿ ನಡೆಸುವ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿವರೆಗೆ ವಸತಿ, ಊಟ, ಪಠ್ಯ ಪುಸ್ತಕ ಹಾಗೂ ಎಲ್ಲ ಪರೀಕ್ಷಾ ಶುಲ್ಕಗಳು ಸೇರಿದಂತೆ ಉಚಿತ ಶಿಕ್ಷಣ ದೊರೆಯಲಿದೆ. 
ನವೋದಯಕ್ಕೆ ಆಯ್ಕೆಯಾದ ವಿದ್ಯಾರ್ಥಿಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net