ಸುರಕ್ಷತೆಗೆ ಪವರ್‌ಮನ್‌ಗಳು ಆದ್ಯತೆ ನೀಡಲಿ

ಪವರ್‌ಮನ್ ದಿನದ ಅಂಗವಾಗಿ ಆಯೋಜಿಸಿದ್ದ ಕ್ರಿಕೇಟ್ ಪಂದ್ಯಾವಳಿಯಲ್ಲಿ ವಿಜೇತರಿಗೆ ಟ್ರೋಫಿ ವಿತರಿಸಲಾಯಿತು.
ಪವರ್‌ಮನ್ ದಿನದ ಅಂಗವಾಗಿ ಆಯೋಜಿಸಿದ್ದ ಕ್ರಿಕೇಟ್ ಪಂದ್ಯಾವಳಿಯಲ್ಲಿ ವಿಜೇತರಿಗೆ ಟ್ರೋಫಿ ವಿತರಿಸಲಾಯಿತು.
Published on
ಕೆ.ಆರ್.ಪೇಟೆ: ನಮ್ಮ ಮನೆಗಳನ್ನು ಬೆಳಗಲು ಜೀವದ ಹಂಗು ತೊರೆದು ಕೆಲಸ ಮಾಡುವ ಪವರ್‌ಮನ್‌ಗಳ ಹಿತರಕ್ಷಣೆಗಾಗಿ ’ಪವರ್‌ಮನ್ ದಿನ ಆಚರಿಸಲಾಗುತ್ತಿದೆ ಎಂದು ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಪುಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವಿಭಾಗದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪವರ್‌ಮನ್ ದಿನ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಹಕರ ಸೇವೆ ಎಷ್ಟು ಮುಖ್ಯವೋ, ಅಷ್ಟೇ ಪವರ್ ಮನ್‌ಗಳ ಆರೋಗ್ಯ ಮತ್ತು ಸುರಕ್ಷತೆಯೂ ಮುಖ್ಯ. ಕೆಲಸದ ಅವಧಿಯಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿ, ನೌಕರರಿಗೆ ’ಸುರಕ್ಷತಾ ಮಂತ್ರ’ವನ್ನು ಬೋಧಿಸಲಾಯಿತು.
ಸಾಮಾಜಿಕ ಚಿಂತಕಿ, ನಗರಸಭಾ ಮಾಜಿ ಉಪಾಧ್ಯಕ್ಷೆ ಇಂದಿರಾ ಸತೀಶ್‌ಬಾಬು ಮತ್ತು ಪಟ್ಟಣದ ಪಲ್ಗುಣಿ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಕಾವ್ಯಾ ಉಪನ್ಯಾಸ ನೀಡಿದರು. ಬೆಸ್ಕಾಂ ಹಿರಿಯ ಪವರ್‌ಮನ್ ಕಗ್ಗೆರೆ ಮಂಜುನಾಥ್ ಅವರು ಏಕಪಾತ್ರಾಭಿನಯದ ಮೂಲಕ ಪವರ್‌ಮನ್ ಅಥವಾ ಲೈನ್‌ಮನ್‌ಗಳ ಸುರಕ್ಷತಾ ಕ್ರಮಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಮತ್ತು ಪವರ್‌ಮನ್ ದಿನದ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ನೌಕರರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಎಇಇ ಪ್ರದೀಪ್, ಇಂಜಿನಿಯರ್ ಶಂಕರ್, ಎಇ ಶಿವರಾಮು, ಲೆಕ್ಕಾಧಿಕಾರಿ ನಯಾಜ್, ಸಹಾಯಕ ಲೆಕ್ಕಾಧಿಕಾರಿ ಶಿವಕುಮಾರ್ ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್‌ಗಳಾದ ಭಾಸ್ಕರ್, ಟಿ.ಜಿ.ತಿಮ್ಮಪ್ಪ, ಸುನಿಲ್‌ಕುಮಾರ್, ನಾಗರಾಜು, ನವೀನ್, ಸತೀಶ್, ಶ್ರೀಕಾಂತ್, ರವೀಂದ್ರ, ಹರೀಶ್ ಕುಮಾರ್, ಎ.ಜೆ.ನಾಗರಾಜು, ಕೆ.ರಘು, ವಿನಯ್, ಜಗದೀಶ್, ನಿತಿನ್, ಅಶೋಕ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net