ವಿವಿಧೆಡೆ ವಿದ್ಯುತ್ ವ್ಯತ್ಯಯ ನಾಳೆ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಉಪ-ವಿದ್ಯುತ್ ವಿತರಣಾ ಕೇಂದ್ರ 66/11 ಕೆ.ವಿ ವ್ಯಾಪ್ತಿಯಲ್ಲಿ ಮಾ.24ರಂದು  ವಿದ್ಯುತ್ ವ್ಯತ್ಯಯವಾಗಲಿದೆ.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಉಪ-ವಿದ್ಯುತ್ ವಿತರಣಾ ಕೇಂದ್ರ 66/11 ಕೆ.ವಿ ವ್ಯಾಪ್ತಿಯಲ್ಲಿ ಮಾ.24ರಂದು ವಿದ್ಯುತ್ ವ್ಯತ್ಯಯವಾಗಲಿದೆ.
Published on
ಶ್ರೀರಂಗಪಟ್ಟಣ: ತಾಲೂಕಿನ ಬೆಳಗೊಳ ಉಪ-ವಿದ್ಯುತ್ ವಿತರಣಾ ಕೇಂದ್ರ 66/11 ಕೆ.ವಿ ವ್ಯಾಪ್ತಿಯಲ್ಲಿ ಮಾ.24ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಬೆಳಗೊಳ, ಕೆ.ಆರ್.ಸಾಗರ, ಮೊಗರಹಳ್ಳಿ, ಹೊಸಹಳ್ಳಿ, ಪಾಲಹಳ್ಳಿ, ಕಾರೇಕುರ, ಕುಪ್ಪೆದಡ, ಬಸ್ತೀಪುರ, ಕೆಇಡಿಬಿ ಇಂಡಸ್ಟ್ರೀಯಲ್, ಹೊಂಗಳ್ಳಿ ವಾಟರ್ ಸಪ್ಲೈ, ಅನಗನಹಳ್ಳಿ, ಹೊಸ ಉಂಡುವಾಡಿ, ಮಜ್ಜಿಗೆಪುರ, ಎಂಎಂಜಿ ಲೇಔಟ್ ಹುಲಿಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂದು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಶ್ರೀರಂಗಪಟ್ಟಣ ವಿದ್ಯುತ್ ಉಪ-ವಿಭಾಗದ ಎಇಇ ಮಂಜುನಾಥ್ ಪ್ರಸಾದ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net