ಬೇಸಿಗೆ ಹಿನ್ನೆಲೆಯಲ್ಲಿ ತೊಣ್ಣೂರು ಕೆರೆಯ ನೀರಿನ ಮಟ್ಟ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಲಿದೆ ಎಂಬ ಅಧಿಕಾರಿಗಳ ವರದಿಯನ್ವಯ ತಹಸೀಲ್ದಾರ್ ನೇತೃತ್ವದ ಟಾಸ್ಕ್‌ಫೋರ್ಸ್ ತಂಡ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಪಂಪ್‌ಸೆಟ್ ತೆರವು ಕಾರ್ಯಾಚರಣೆಗೆ ಇಳಿದಿದೆ. ಈ ವೇಳೆ ಕೆರೆಯ ಹಿನ್ನೀರಿನ ವ್ಯಾಸ್ತಿಯ ಹಲವು ಗ್ರಾಮಗಳ ರೈತರು ಅಂದಾಜು 330ಕ್ಕೂ ಅಧಿಕ ಮೋಟಾರ್‌ಗಳನ್ನು ಅಳವಡಿಸಿ ಬೆಳೆಗಳಿಗೆ ನೀರೆತ್ತಿರುವುದು ಕಂಡು ಬಂದಿದೆ.