ನೇಣು ಬಿಗಿದುಕೊಂಡು ಪೇದೆ ಆತ್ಮಹತ್ಯೆ

ಮೃತ ಪೊಲೀಸ್ ಪೇದೆ ರಮೇಶ್
ಮೃತ ಪೊಲೀಸ್ ಪೇದೆ ರಮೇಶ್
Published on

ಪ್ರಮುಖ ಮುಖ್ಯಾಂಶಗಳು

  • ನಗರದ ನ್ಯಾಯಾಲಯದಲ್ಲಿ ಕರ್ತವ್ಯ
  • ಪೊಲೀಸ್ ಪೇದೆ
ಮದ್ದೂರು: ನಗರದ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮೇಶ್ (35) ಆತ್ಮಹತ್ಯೆ ಮಾಡಿಕೊಂಡವರು. ನಗರ ಪೊಲೀಸ್ ಠಾಣೆ ಹಿಂದೆ ಇರುವ ಪೊಲೀಸ್ ವಿಶ್ರಾಂತಿ ಗೃಹಕ್ಕೆ ಮಂಗಳವಾರ ರಾತ್ರಿ 10 ಗಂಟೆಯಲ್ಲಿ ಪೊಲೀಸ್ ಪೇದೆಯೊಬ್ಬರು ವಿಶ್ರಾಂತಿ ಹೋದಾಗ ರಮೇಶ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ರಮೇಶ್‌ಗೆ ಪೇದೆಯಾದ ಮಹೇಶ್ ಹಿಂಸೆ ನೀಡುತ್ತಿದ್ದರು. ಎಷ್ಟೋ ಬಾರಿ ಗಲಾಟೆ ಕೂಡ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತರ ಪತ್ನಿ ಪುಷ್ಪಲತಾ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮೃತ ಪೇದೆ ರಮೇಶ್ ಹಾಗೂ ಮಹೇಶ್ ಇಬ್ಬರೂ ನಗರದ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇಬ್ಬರೂ ಪೊಲೀಸ್ ಠಾಣೆ ಬಳಿಯಿರುವ ಪೊಲೀಸ್ ವಸತಿಗೃಹದ ನಿವಾಸಿಗಳಾಗಿದ್ದರು ಎನ್ನಲಾಗಿದೆ. ಮೃತ ರಮೇಶ್ ಅವರ ಅಂತ್ಯಕ್ರಿಯೆ ಸ್ವಗ್ರಾಮ ಚಿಕ್ಕಬಳ್ಳಾಪುರದಲ್ಲಿ ಬುಧವಾರ ಸಂಜೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net