ಭಾರತ ಸ್ವಾತಂತ್ರ್ಯಗೊಂಡು ಮೊದಲ ಚುನಾವಣೆ ನಡೆಸುವ ಸಮಯದಲ್ಲಿ ಜವಹರಲಾಲ್ ನೆಹರು ಬಳಿ ಬಂದ ಟಾಟಾ-ಬಿರ್ಲಾ ಸಂಸತ್ತಿನ ಚುನಾವಣೆಯಲ್ಲಿ ನಮಗೂ ಸೀಟುಗಳನ್ನು ಮೀಸಲಿಡಬೇಕೆಂಬ ಪ್ರಸ್ತಾಪ ಮುಂದಿಟ್ಟಾಗ, ನೆಹರು ಅವರು ಭಾರತ ಈಗಷ್ಟೇ ಸ್ವಾತಂತ್ರ್ಯ ಕಂಡಿದೆ. ರಸ್ತೆಗಳು, ಸೇತುವೆಗಳು, ಸಂಪರ್ಕಗಳು, ಆಸ್ಪತ್ರೆ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳು ಅಭಿವೃದ್ಧಿಯಾಗಬೇಕಿದೆ. ಮೊದಲು ಅವುಗಳಿಗೆ ಆದ್ಯತೆ ನೀಡಿ. ಏಕೆಂದರೆ, ರಾಜಕೀಯ ಅಧಿಕಾರ ಮತ್ತು ಹಣದ ಶಕ್ತಿ ಒಂದೇ ಕಡೆ ಕೇಂದ್ರೀಕೃತವಾಗಬಾರದು ಎಂದಿದ್ದರು. ಆದರೆ, ಇಂದು ಅದಕ್ಕೆ ಪೂರಕವಾಗಿಯೇ ನಡೆಯುತ್ತಿರುವುದು ವಿಪರ್ಯಾಸ ಎಂದರು.