ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ಪಡೆಯಲು ಅರ್ಹರಿರುವ ಅರ್ಜಿದಾರರು, ಅನುಬಂಧ-1ರ ರೀತ್ಯಾ ಅಫಿಡವಿಟ್‌ಗೆ ಪೂರಕವಾಗಿ ಮುಂದಿನಂತೆ ಒಂದಕ್ಕಿಂತ ಹೆಚ್ಚಿನ ದಾಖಲೆ ಸಲ್ಲಿಸಬೇಕು. ಜನನ ಪ್ರಮಾಣ ಪತ್ರ, ಶಾಲಾ ಶೈಕ್ಷಣಿಕ ದಾಖಲೆ, 10 ವರ್ಷದ ನಿವಾಸದ ದಾಖಲೆ, ಆಸ್ತಿ ದಾಖಲೆ, ಮತದಾರರ ಪಟ್ಟಿ, ಆಧಾರ್, ಪಡಿತರ ಚೀಟಿ, ಸರ್ಕಾರಿ ಅಥವಾ ಸಾರ್ವಜನಿಕ ಸಂಸ್ಥೆಯ ಸೇವಾ ಪ್ರಮಾಣ ಪತ್ರ, ವಿವಾಹ ಪ್ರಮಾಣ ಪತ್ರ, ಸರ್ಕಾರ ಮಾನ್ಯಗೊಳಿಸಿರುವ ಇತರೆ ಪೂರಕ ದಾಖಲೆ ಸಲ್ಲಿಸಬೇಕು. ಏಕರೂಪ ವ್ಯವಸ್ಥೆಯಡಿ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮಾವಳಿಗಳಿಗೆ ಯಾವುದೇ ಧಕ್ಕೆಯಾಗದಂತೆ ಪಾರದರ್ಶಕವಾಗಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು.