ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಎನ್.ಕೆ.ಮನು, ಕೆ.ಪಿ.ಶಶಿಕಲ, ಎಸ್.ದಾಕ್ಷಾಯಣಿ, ರಾಧಾ, ಜಿ.ಫಾತಿಮಾ, ಎಸ್.ರೇಣುಕಾ, ಬಿ.ಆಶಾರಾಣಿ ಹಾಗೂ ಸಿ.ರೂಪಾ ಅವರಿಗೆ ಫ್ಲಾರೆನ್ಸ್ ನೈಟಿಂಗೇಲ್‌ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆ.ಟಿ.ಹನುಮಂತು, ಶಂಕರೇಗೌಡ, ಕೆ.ಆರ್.ಶಶಿಧರ್, ಎಂ.ಎನ್.ಶಿವಣ್ಣ, ವಿ.ಧನಂಜಯ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೆ.ಟಿ.ಹನುಮಂತು ಶ್ಲಾಘನೆ
ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ
ಮದ್ದೂರು:ರೋಗಿಗಳು ಶೀಘ್ರವಾಗಿ ಗುಣಮುಖರಾಗೆಂದು ಹಗಲಿರಳು ಪ್ರಾಮಾಣಿಕವಾಗಿ ಉಪಚರಿಸುವ ದಾದಿಯರು ರೋಗಿಗಳ ಪಾಲಿನ ದೇವರು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಶ್ಲಾಘಿಸಿದರು.
ತಾಲೂಕಿನ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಹಾಗೂ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಂತಾರಾಷ್ಟ್ರೀಯ ದಾದಿಯರ ದಿನ-2026ರ ಅಂಗವಾಗಿ ಹಮ್ಮಿಕೊಂಡಿದ್ದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾದಿಯರ ತ್ಯಾಗ, ಸೇವಾ ಮನೋಭಾವ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅವರ ಅಸಾಧಾರಣ ಕೊಡುಗೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕೆಂದರು.
ಜಗತ್ತಿನಲ್ಲಿ ದಾದಿಯರಿಗೆ ತಾಯಿಯ ನಂತರದ ಸ್ಥಾನ. ತಾಯಿ ಮಗುವನ್ನು ಹೇಗೆ ರಕ್ಷಿಸುವುದಕ್ಕೆ ಪರಿತಪ್ಪಿಸುತ್ತಾಳೆ ಅದೇ ರೀತಿ ದಾದಿಯರು ತಮ್ಮ ರೋಗಿಗಳ ಆರೈಕೆಯಲ್ಲಿ ಯಾವುದೇ ಹಿಂಜರಿಕೆ ತೋರುವುದಿಲ್ಲ . ಕೋವಿಡ್ ಸಂದರ್ಭದಲ್ಲಿ ದಾದಿಯರು ತೋರಿದ ಕಾಯಕ ಪ್ರೀತಿ ಹಾಗೂ ಯೋಧರಂತೆ ದುಡಿದ ದಾದಿಯರ ಕ್ರಮ ಅನನ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಆಧುನಿಕ ನರ್ಸಿಂಗ್‌ನ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ಅಂಗವಾಗಿ ದಾದಿಯರ ದಿನಾಚರಣೆ ಆಚರಿಸಲಾಗುತ್ತದೆ. ನಮ್ಮ ದಾದಿಯರು ನಮ್ಮ ಭವಿಷ್ಯ, ಸಶಕ್ತ ದಾದಿಯರು ಜೀವ ಉಳಿಸುತ್ತಾರೆ ಎಂಬುವುದು 2026 ರ ಘೋಷಣೆಯಾಗಿದೆ ಎಂದರು.
ಫ್ಲಾರೆನ್ಸ್ ನೈಟಿಂಗೇಲ್ ನಿಸ್ವಾರ್ಥ ಸೇವೆ ಗುರುತಿಸಿದ ಜಗತ್ತು ಈಕೆ ಮಾಡಿದ ಸೇವೆಯಿಂದ ದಾದಿಯರಿಗೆ ವಿಶೇಷವಾದ ಸ್ಥಾನಮಾನ ದೊರೆತು. ಬಹಳಷ್ಟು ಸೇವಾ ಮನೋಭಾವದ ಜನರು ನರ್ಸಿಂಗ್ ಕಲಿಕೆಗೆ ಮುಂದಾಗಿದ್ದರು ಎಂಬುವುದು ಗಮನಾರ್ಹವಾದ ಅಂಶ . ಇದು ವೈದ್ಯಕೀಯ ಜಗತ್ತಿನಲ್ಲಿ ದಾದಿಯರಿಗೆ ವಿಶೇಷವಾದ ಸ್ಥಾನಮಾನ ಸಿಗುವುದಲ್ಲಿ ಸಹಕಾರಿಯಾಯಿತು ಎಂದರು.
ವೈದ್ಯರ ಜೀವನ ಉಳಿಸುವಲ್ಲಿ ದಾದಿಯರ ಪಾತ್ರವು ಅತಿ ಮುಖ್ಯವಾಗಿರುವುದರಿಂದ ಸರ್ಕಾರಗಳು ಇವರ ಸೇವೆಯನ್ನು ಗುರುತಿಸಿ ಸೂಕ್ತ ವೇತನ ಹಾಗೂ ವಿಶೇಷ ಸೌಲಭ್ಯಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಎನ್.ಕೆ.ಮನು, ಕೆ.ಪಿ.ಶಶಿಕಲಾ, ಎಸ್.ದಾಕ್ಷಾಯಣಿ, ರಾಧಾ, ಜಿ.ಫಾತಿಮಾ, ಎಸ್.ರೇಣುಕಾ, ಬಿ.ಆಶಾರಾಣಿ ಹಾಗೂ ಸಿ.ರೂಪಾ ಅವರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹಿರಿಯ ಆರೋಗ್ಯ ನಿರೀಕ್ಷಕ ಶಂಕರೇಗೌಡ, ಅಲಯನ್ಸ್ ಸಂಸ್ಥೆಯ ಕೆ.ಆರ್.ಶಶಿಧರ್, ಎಂ.ಎನ್.ಶಿವಣ್ಣ, ವಲಯಾಧ್ಯಕ್ಷ ಎಸ್.ಎನ್.ಕೃಷ್ಣಪ್ಪ, ಜಿಲ್ಲಾ ಸಂಚಾಲಕ ಜಿ.ಧನಂಜಯ ವೈದ್ಯಾಧಿಕಾರಿ ಡಾ.ನಿಸರ್ಗ, ಆಡಳಿತಾಧಿಕಾರಿ ಡಾ.ಆಯುಷಾ ದಬ್ಬಾನಿ ಇತರರು ಇದ್ದರು.