ರೋಗಿಯ ಹಕ್ಕುಗಳ ಸಂರಕ್ಷಣೆ ಅಗತ್ಯ

ಮಳವಳ್ಳಿ ಪಟ್ಟಣದಲ್ಲಿ ವಿದ್ಯಾಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ  ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಸ್.ವಸಂತಕುಮಾರ್ ಉದ್ಘಾಟಿಸಿ ಮಾತನಾಡಿದರು. ಲತಾ, ಅಶ್ವಥ್, ಮಹಾಲಕ್ಷ್ಮೀ, ಸೂನಗಹಳ್ಳಿ ಪುಟ್ಟಸ್ವಾಮಿ , ಚಂದ್ರಮೋಹನ್ ಇದ್ದರು.
ಮಳವಳ್ಳಿ ಪಟ್ಟಣದಲ್ಲಿ ವಿದ್ಯಾಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಸ್.ವಸಂತಕುಮಾರ್ ಉದ್ಘಾಟಿಸಿ ಮಾತನಾಡಿದರು. ಲತಾ, ಅಶ್ವಥ್, ಮಹಾಲಕ್ಷ್ಮೀ, ಸೂನಗಹಳ್ಳಿ ಪುಟ್ಟಸ್ವಾಮಿ , ಚಂದ್ರಮೋಹನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಸ್.ವಸಂತಕುಮಾರ್ ಅಭಿಮತ
  • ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ
ಮಳವಳ್ಳಿ: ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುವ ಪ್ರತಿಯೊಬ್ಬ ರೋಗಿಯನ್ನು ಗ್ರಾಹಕರೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ರೋಗಿಯ ಹಕ್ಕುಗಳನ್ನು ಸಂರಕ್ಷಿಸಬೇಕು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಸ್.ವಸಂತಕುಮಾರ್ ಕರೆ ನೀಡಿದರು.
ಪಟ್ಟಣದ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಗತ್ಯವಿದ್ದಾಗ ವೈದ್ಯಕೀಯ ಆರೈಕೆ ಪಡೆದುಕೊಳ್ಳುವುದು ರೋಗಿಯ ಹಕ್ಕಾಗಿದ್ದು, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಇದನ್ನು ಗೌರವಿಸುವುದು ಕರ್ತವ್ಯವಾಗಿರುತ್ತದೆ ಎಂದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಪ್ರತೀಕ್ ಜಿ.ಹೆಗ್ಡೆ ಮಾತನಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಹಾಗೂ ಮುಂದುವರಿಸುವ ರೋಗಿಯ ಹಕ್ಕನ್ನು ಎತ್ತಿ ಹಿಡಿಯಬೇಕಾದದ್ದು ಆಸ್ಪತ್ರೆಯ ಸಿಬ್ಬಂದಿಯ ಕರ್ತವ್ಯ. ಇದಕ್ಕೆ ಕುಂದು ಬಂದಲ್ಲಿ ರೋಗಿಯು ಕೂಡಲೇ ಗ್ರಾಹಕರ ಮಾಹಿತಿ ಕೇಂದ್ರ ಅಥವಾ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದರು.
ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಲಿಂಗರಾಜು ಮಾತನಾಡಿ, ಔಷಧದ ಪ್ಯಾಕೆಟ್ ಮೇಲೆ ಉತ್ಪನ್ನದ ಗರಿಷ್ಟ ಮಾರಾಟ ಬೆಲೆ, ಪ್ರಮಾಣ, ತಯಾರಾದ ಹಾಗೂ ಎಕ್ಸ್‌ಪೈರಿ ದಿನಾಂಕ ಸೇರಿ ಔಷಧದ ಹೆಸರು ಹಾಗೂ ಇತರೆಲ್ಲ ವಿವರಗಳನ್ನು ತಪ್ಪದೆ ಮುದ್ರಿಸಿರಬೇಕು. ಇಲ್ಲದಿದ್ದಲ್ಲಿ ಗ್ರಾಹಕರಿಗೆ ಮಾಹಿತಿ ನಿರಾಕರಿಸಿದಂತೆ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಲತಾ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಆಹಾರ ನಿರೀಕ್ಷಕ ಅಶ್ವತ್ಥ್, ಆಹಾರ ಶಿರಸ್ತೇದಾರ್ ಮಹಾಲಕ್ಷ್ಮೀ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಸೂನಗಹಳ್ಳಿ ಪುಟ್ಟಸ್ವಾಮಿ , ಕಾಲೇಜು ಪ್ರಾಂಶಪಾಲ ಚಂದ್ರಮೋಹನ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net