ಬಿ.ಜಿ.ಎಸ್ ಬಾಲಜಗತ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಕ್ರೀಡಾ ಕೂಟ
Published on:
Copied
Follow Us
ಕೆ.ಆರ್.ಸಾಗರ: ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾಂಗಣದಲ್ಲಿ ಶಾಲಾ ಪಾಲಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕ್ರೀಡಾಕೂಟಕ್ಕೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರ ನಾಥ ಸ್ವಾಮಿಜಿ ಚಾಲನೆ ನೀಡಿ, ಮಾತನಾಡಿ ಪಾಲಕರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವ ಮೆರೆದಿದ್ದು, ಮಕ್ಕಳಲ್ಲಿನ ಪ್ರೀತಿ ತೋರಿಸುತ್ತದೆ ಎಂದರು.
ಹುಲಿಕರೆ ಗ್ರಾಮದ ಬಿ.ಜಿ.ಎಸ್ ಬಾಲಜಗತ್ ಶಾಲೆಯಲ್ಲಿ ಪಾಲಕರಿಗೆ ವಿವಿಧ ಕ್ರೀಡಾ ಚಟುವಟಿಕೆ ನಡೆಸಲಾಯಿತು. ತಮ್ಮ ಪಾಲಕರು ಕ್ರೀಡೆಯಲ್ಲಿ ಭಾಗವಹಿಸಿದ್ದನ್ನು ಕಂಡು ಮಕ್ಕಳು ಸಂಭ್ರಮಿಸಿದರು.
ಮಹಿಳೆಯರಿಗೆ ಥ್ರೋ ಬಾಲ್, ಬ್ಲೇಂಡ್ ರನ್ನಿಂಗ್, ಪುರುಷರಿಗೆ ವಾಲಿಬಾಲ್ ಮತ್ತು ಗೋಣಿ ಚೀಲದ ಓಟ, ಹಾಗೂ ದಂಪತಿಗಳಿಗೆ ಪ್ರತ್ಯೇಕ ಕ್ರೀಡೆಗಳನ್ನುನಡೆಸಲಾಯಿತು.
ಮುಖ್ಯಶಿಕ್ಷಕಿ ಆಶಾ.ವಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸಿಬ್ಬಂದಿ ಇದ್ದರು.