ಗಂಜಾಂನಲ್ಲಿ ಅತ್ತಿಗೆ ಚಿತಾಭಸ್ಮ ವಿಸರ್ಜಿಸಿದ ಪರಮೇಶ್ವರ್

ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಕಾವೇರಿ ತ್ರಿವೇಣಿ ಸಂಗಮಕ್ಕೆ ತಮ್ಮ ಅತ್ತಿಗೆಯವರ ಧಾರ್ಮಿಕ ಅಪರ ಕ್ರಿಯೆ ನೆರವೇರಿಸುವ ಸಲುವಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಕುಟುಂಬ ಸಮೇತ ಖಾಸಗಿಯಾಗಿ ಭೇಟಿ ನೀಡಿದ್ದು, ಪೊಲೀಸ್ ದಕ್ಷಿಣ ವಲಯ ಆಯುಕ್ತ ಬೋರಲಿಂಗಯ್ಯ, ಜಿಲ್ಲಾ ವರಿಷ್ಠಾಧಿಕಾರಿ ಶೋಭಾರಾಣಿ ಅವರೊಂದಿಗೆ ಚರ್ಚಿಸಿದರು.

Published on

ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಕುಟುಂಬದವರೊಂದಿಗೆ ಭೇಟಿ

ಶ್ರೀರಂಗಪಟ್ಟಣ: ಪಟ್ಟಣದ ಸಮೀಪದ ಗಂಜಾಂನ ಕಾವೇರಿ ತ್ರಿವೇಣಿ ಸಂಗಮಕ್ಕೆ ಸೋಮವಾರ ಗೃಹಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಕುಟುಂಬ ಸದಸ್ಯರೊಂದಿಗೆ ಖಾಸಗಿಯಾಗಿ ಭೇಟಿ ನೀಡಿದ್ದರು.
ಇತ್ತೀಚೆಗೆ ತಮ್ಮ ಅಣ್ಣ ಡಾ.ಜಿ.ಶಿವಪ್ರಸಾದ್ ಅವರ ಪತ್ನಿ ಗಂಗಾಬಿಕೆ ಅವರು ಅನಾರೋಗ್ಯದಿಂದ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಅತ್ತಿಗೆ ಅವರ ಧಾರ್ಮಿಕ ಅಪರಕರ್ಮಗಳನ್ನು ನೆರವೇರಿಸುವ ಉದ್ದೇಶದಿಂದ ಗಂಜಾಂನ ಸಂಗಮಕ್ಕೆ ಸೋಮವಾರ ಮಧ್ಯಾಹ್ನ ತಮ್ಮ ಪತ್ನಿ ಹಾಗೂ ಸಂಪೂರ್ಣ ಕುಟುಂಬದೊಂದಿಗೆ ಖಾಸಗಿ ವಾಹನಗಳಲ್ಲಿ ಆಗಮಿಸಿದ್ದ ಅವರು ಕಾವೇರಿ ನದಿ ತೀರದಲ್ಲಿ ವಿವಿಧ ಶ್ರಾದ್ಧ ಕಾರ್ಯಗಳು ಸೇರಿದಂತೆ ನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಿ ಬಳಿಕ ಮಧ್ಯಾಹ್ನ ಖಾಸಗಿ ರೆಸಾರ್ಟ್‌ನಲ್ಲಿ ತಂಗಿ ಸಂಜೆ ಸಂಜೆ ವೇಳೆಗೆ ತಮ್ಮ ಸ್ವಕ್ಷೇತ್ರಕ್ಕೆ ತೆರಳಿದರು.
ಪೊಲೀಸ್ ದಕ್ಷಿಣ ವಲಯ ಆಯುಕ್ತ ಬೋರಲಿಂಗಯ್ಯ, ಜಿಲ್ಲಾ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಶಾಂತಮಲ್ಲಪ್ಪ, ತಹಸೀಲ್ದಾರ್ ಚೇತನಾ ಯಾದವ್, ಶ್ರೀರಂಗಪಟ್ಟಣ ಟೌನ್ ಠಾಣೆ ಇನ್‌ಪೆಕ್ಟರ್ ಬಿ.ಜಿ.ಕುಮಾರ್, ಕೆಆರ್‌ಎಸ್ ವೃತ್ತದ ಸಿಪಿಐ ವಿವೇಕಾನಂದ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net