ಪಾಂಡವಪುರ ತಾಲೂಕಿನಿಂದ ಹೈನುಗಾರಿಕೆ ಕುರಿತು ಅಧ್ಯಯನ ಪ್ರವಾಸಕ್ಕಾಗಿ ಗುಜರಾತ್‌ಗೆ ಹೊರಟ ಡೇರಿ ಸದಸ್ಯರು, ಕಾಯಶರ್ಶದರ್ಶಿಗಳ ಪ್ರವಾಸಕ್ಕೆ ಮನ್‌ಮುಲ್ ಮುಖ್ಯವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ರಘು, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಚಾಲನೆ ನೀಡಿದರು.
Published on:
Copied
Follow Us
ಪಾಂಡವಪುರ: ಹೈನುಗಾರಿಕೆ ಸಂಬಂಧ ಗುಜರಾತ್ ರಾಜ್ಯಕ್ಕೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಸಂಘದ ಕಾರ್ಯದರ್ಶಿಗಳು ಕೈಗೊಂಡಿರುವ ಅಧ್ಯಯನ ಪ್ರವಾಸಕ್ಕೆ ಮನ್‌ಮುಲ್ ಮುಖ್ಯವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ರಘು, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಚಾಲನೆ ನೀಡಿದರು.
ಮನ್‌ಮುಲ್ ಮುಖ್ಯವ್ಯವಸ್ಥಾಪಕ ಎಚ್.ಆರ್. ರಘು ಮಾತನಾಡಿ, ಹೈನುಗಾರಿಕೆ ಕುರಿತು ವೈಜ್ಞಾನಿಕವಾಗಿ ಅನುಭವ ಪಡೆದು ತಾವು ಹೈನುಗಾರಿಕೆ ಅಭಿವೃದ್ಧಿ ಹೊಂದುವ ಉದ್ದೇಶದಿಂದ ಗುಜರಾತ್ ರಾಜ್ಯದ ಪ್ರವಾಸಕ್ಕೆ ಇಲ್ಲಿನ ರೈತರು ಹಾಗೂ ಡೇರಿ ಕಾರ್ಯದರ್ಶಿಗಳನ್ನು ಕಳುಹಿಸಲಾಗಿದೆ. ಹೋದಂತಹ ರೈತರು ಅಲ್ಲಿನ ತಂತ್ರಜ್ಞಾನ, ವೈಜ್ಞಾನಿಕವಾಗಿ ಹಸು ಸಾಕಾಣಿಕೆ, ಗುಣಮಟ್ಟದ ಹಾಲು ಉತ್ಪಾದನೆ ಕುಶಲತೆ ಅರಿತು ಅಳವಡಿಸಿಕೊಳ್ಳಬೇಕು. ಪ್ರವಾಸದಲ್ಲಿ ಅಧ್ಯಯಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಹೈನುಗಾರಿಕೆಯಲ್ಲಿ ಪಾಂಡವಪುರ ತಾಲೂಕು ಜಿಲ್ಲೆ ಮಾದರಿಯಾಗಿದೆ. ಕಾಮನ್‌ಸಾಪ್ಟ್‌ವೇರ್ ಅಳವಡಿಕೆ ಮಾಡಿಕೊಂಡು ರೈತರಿಗೆ ಗುಣಮಟ್ಟದ ಮೇಲೆ ದರ ನೀಡುತ್ತಿದ್ದಾರೆ. ರೈತರೂ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದರು.
ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಗುಜರಾತ್ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಗುಣಮಟ್ಟದ ಹಾಲು ಉತ್ಪಾದನೆ ಮಾಡುತ್ತಿದೆ. ಹಾಗಾಗಿ ನಮ್ಮ ಭಾಗದ ರೈತರು ಸಹ ಅದನ್ನು ಅಳವಡಿಕೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಇಲ್ಲಿನ ರೈತರು ಮತ್ತು ಡೇರಿ ಕಾರ್ಯದರ್ಶಿಗಳನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ರೈತರು ಅಲ್ಲಿನ ಮಾದರಿ ಅರಿಯಬೇಕು ಎಂದರು.
ಸಂದರ್ಭದಲ್ಲಿ ವ್ಯವಸ್ಥಾಪಕ ಡಾ.ಅಕ್ಲಪ್ಪರೆಡ್ಡಿ, ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರ್ಣಾಧಿಕಾರಿಗಳಾದ ಉಷಾ, ನಾಗೇಂದ್ರ, ಪ್ರಜ್ವಲ್, ಪ್ರಕಾಶ್, ಮಧುಶಂಕರ್, ಟೆಕ್ನಿಷಿಯನ್ ಆನಂದ್, ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಶಿವಪ್ಪ ಇತರರು ಇದ್ದರು.