ಹುಲಿಕೆರೆ ವೃತ್ತದ ಗ್ರಾಮ ಲೆಕ್ಕಿಗನ ವಿರುದ್ಧ ಆಕ್ರೋಶ

 ಬೆಳಗೊಳ ನಾಡ ಕಚೇರಿ ಮುಂಭಾಗ ಉಪ ತಹಸೀಲ್ದಾರ್ ವರುಣ್‌ಗೆ ಹುಲಿಕೆರೆ ನಿವಾಸಿ ಜಗದೀಶ್ ಹಾಗೂ ಕುಟುಂಬದವರು ಮಾಹಿತಿ ನೀಡುತ್ತಿರುವುದು.
ಬೆಳಗೊಳ ನಾಡ ಕಚೇರಿ ಮುಂಭಾಗ ಉಪ ತಹಸೀಲ್ದಾರ್ ವರುಣ್‌ಗೆ ಹುಲಿಕೆರೆ ನಿವಾಸಿ ಜಗದೀಶ್ ಹಾಗೂ ಕುಟುಂಬದವರು ಮಾಹಿತಿ ನೀಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜಮೀನನ್ನು ಬೇರೆಯವರ ಹೆಸರಿಗೆ ಆರ್‌ಟಿಸಿ ಮಾಡಲು ಸಹಾಯ
  • ಹುಲಿಕೆರೆ ಗ್ರಾಮದ ರೈತ ಜಗದೀಶ್ ಹಾಗೂ ಕುಟುಂಬ ಸದಸ್ಯರು
  • ಬೆಳಗೊಳ ನಾಡ ಕಚೇರಿ ಮುಂಭಾ
ಕೆ.ಆರ್.ಸಾಗರ: ಸತತ 50 ವರ್ಷದಿಂದ ಅನುಭವದಲ್ಲಿದ್ದುಕೊಂಡು ವ್ಯವಸಾಯ ಮಾಡುತ್ತಿದ್ದ ಜಮೀನನ್ನು ಬೇರೆಯವರ ಹೆಸರಿಗೆ ಆರ್‌ಟಿಸಿ ಮಾಡಲು ಸಹಾಯ ಮಾಡಲಾಗಿದೆ ಎಂದು ಆರೋಪಿಸಿ ಹುಲಿಕೆರೆ ಗ್ರಾಮದ ರೈತ ಜಗದೀಶ್ ಹಾಗೂ ಕುಟುಂಬ ಸದಸ್ಯರು ಬೆಳಗೊಳ ನಾಡ ಕಚೇರಿ ಮುಂಭಾಗದಲ್ಲಿ ಹುಲಿಕೆರೆ ವೃತ್ತದ ಗ್ರಾಮ ಲೆಕ್ಕಿಗ ರಘು ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು.
ಹುಲಿಕೆರೆ ಗ್ರಾಮದ ಸರ್ವೇ ನಂ 74 ರಲ್ಲಿ 1.36 ಎಕರೆ ಜಮೀನಿದ್ದು, ಸುಮಾರು 60 ವರ್ಷಗಳಿಂದ ಅನುಭವದಲ್ಲಿದ್ದೇವೆ. ಇದರಿಂದ ಲೇ ನಮ್ಮ ಕುಟುಂಬ ಜೀವನ ನಡೆಸುತ್ತಿದ್ದು, ಕೆಲವು ತಾಂತ್ರಿಕ ದೋಷದಿಂದ ನರಸಮ್ಮ ಅವರ ಹೆಸರು ಆರ್‌ಟಿಸಿಯಲ್ಲಿ ದಾಖಲಾಗಿದೆ. ಇದನ್ನು ಸರಿಪಡಿಸಿಕೊಡುವಂತೆ ದಾಖಲೆ ಸಮೇತ ಉಪವಿಭಾಗಧಿಕಾರಿ ಮತ್ತು ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ದಾವೆ ಹಾಕಲಾಗಿದ್ದು, ಈ ಕುರಿತು ಹುಲಿಕರೆ ವೃತ್ತದ ಗ್ರಾಮ ಲೆಕ್ಕಿಕರಿಗೂ ಮಾಹಿತಿ ನೀಡಲಾಗಿದೆ. ಆದಾಗ್ಯೂ ನರಸಮ್ಮ ಅವರೇ ವಾರಸುದಾರರೆಂದು ದಾಖಲೆ ಸೃಷ್ಟಿಸಿ ಅವರ ಹೆಸರಿಗೆ ಗ್ರಾಮ ಲೆಕ್ಕಿಗ ರಘು ಖಾತೆ ಮಾಡಲು ಸಹಾಯ ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದರ ಜತೆಗೆ ಖಾತೆ ರದ್ದು ಪಡಿಸುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು.
ಬಳಿಕ ಉಪ ತಹಸೀಲ್ದಾರ್ ವರುಣ್ ಪ್ರತಿಭಟನಾಕಾರರಿಂದ ಮಾಹಿತಿ ಪಡೆದು ದಾಖಲೆ ಪರಿಶೀಲನೆ ಮಾಡಿದರು. ಅಲ್ಲದೆ ಪ್ರಕರಣ ದಾಖಲು ಮಾಡಿದ್ದರ ಕುರಿತು ಇಲಾಖೆಗೆ ದಾಖಲೆ ಸಮೇತ ಮಾಹಿತಿ ನೀಡುವಂತೆ ತಿಳಿಸಿದರಲ್ಲದೆ, ಅಧಿಕಾರಿಗಳಿಂದ ತಪ್ಪಾಗಿದ್ದರೆ ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಗ್ರಾಮ ಲೆಕ್ಕಿಗ ರಘು ಅವರಿಂದ ಮಾಹಿತಿ ಪಡೆದ ಉಪ ತಹಸೀಲ್ದಾರ್, ಯಾವುದೇ ರೈತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ವ್ಯಾಜ್ಯಗಳಲ್ಲಿ ತಕರಾರಿದ್ದರೆ ಹಿರಿಯ ಅಧಿಕಾರಿಗಳ ಸಲಹೆಯಂತೆ ಕೆಲಸ ಮಾಡಿ ಎಂದರು. ಈ ವೇಳೆ ಸ್ಥಳದಲ್ಲಿದ್ದ ಜಗದೀಶ್ ಕುಟುಂಬದವರು ಗ್ರಾಮ ಲೆಕ್ಕಿಗ ರಘು ಅವರನ್ನು ತರಾಟೆಗೆ ತೆಗೆದುಕೊಂಡರು.
ಹುಲಿಕೆರೆ ಗ್ರಾಪಂ ಮಾಜಿ ಸದಸ್ಯ ಚೆಲವರಾಜು, ಬೆಳಗೊಳ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್, ರ‌್ಯಾಂಬೋ ರವಿಕುಮಾರ್, ಲೊಕೇಶ್ ಇತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net