ನಾಳೆ ಸಾವಯವ ಕೃಷಿ ಸಂತೆ

ಕವಿತಾ ಕುರಗಂಟಿ
ಕವಿತಾ ಕುರಗಂಟಿ
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸ್ವರಾಜ್ಯ ವೇದಿಕೆಯ ಕವಿತಾ ಮಾಹಿತಿ
ಪಾಂಡವಪುರ: ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಜೂ.1 ರಂದು ಸಾವಯವ ಸಂತೆ ಆಯೋಜಿಸಲಾಗಿದೆ ಎಂದು ರೈತ ಸ್ವರಾಜ್ಯ ವೇದಿಕೆಯ ಕವಿತಾ ಕುರಗಂಟಿ ತಿಳಿಸಿದರು.
ರೈತರು ಬೆಳೆದ ಸಾವಯವ ಬೆಳೆಗಳಿಗೆ ಮದ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಹಕರಿಗೆ ವಿಷ ರಹಿತ ಆಹಾರ ಮತ್ತು ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಾವಯವ ಕೃಷಿಕರು ಸಂಘಟಿತರಾಗಿ ಸಾವಯವ ಸಂತೆ ಆಯೋಜಿಸುತ್ತಿದ್ದಾರೆ. ಹದಿನೈದು ದಿನಗಳಿಗೊಮ್ಮೆಯಂತೆ ಮೂರು ತಿಂಗಳುಗಳ ಕಾಲ ಈ ಸಂತೆ ಆಯೋಜನೆಗೊಳ್ಳುತ್ತಿದೆ. ಸಂತೆ ಮೂರು ಗಂಟೆಗಳ ಕಾಲ ಮಾತ್ರ ನಡೆಯುತ್ತದೆ. ಈ ಸಂತೆಗೆ ಫರ್ಟಿಲೈಸರ್ಸ್‌ ಬಳಕೆ ಇಲ್ಲದೆ ನೈಸರ್ಗಿಕವಾಗಿ ಬೆಳೆದ ಬೆಳೆಗಳು, ನಾಟಿ ಹಸು ಹಾಲು, ಬೆಣ್ಣೆ, ತುಪ್ಪ, ಹುರುಳಿ, ತಣ್ಣಿ ಸೇರಿದಂತೆ ಸಾವಯವ ಆಹಾರ ಪದಾರ್ಥಗಳನ್ನು ತಂದು ರೈತರು ನೇರವಾಗಿ ಮಾರಾಟಬಹದು. ಇಲ್ಲಿ ಯಾವ ಮದ್ಯವರ್ತಿಗಳು ಇರುವುದಿಲ್ಲ. ರೈತರಿಗೆ ಉತ್ತೇಜನ ಕೊಡುವುದಕ್ಕಾಗಿ ಇಂತಹ ಸಂತೆ ಆಯೋಜಿಸಲಾಗುತ್ತಿದೆ. ಜಿಲ್ಲೆ ಮತ್ತು ತಾಲೂಕಿನ ರೈತರು ಈ ಸಂತೆಯಲ್ಲಿ ಭಗವಹಿಸಬಹುದು ಎಂದು ಹೇಳಿದರು.
ಜನ ಕಡಿಮೆ ದರಕ್ಕೆ ಸಿಗುವ ಆಹಾರ ಪದಾರ್ಥಗಳನ್ನು ಖರೀದಿಸಿ ಅದರಿಂದ ಆರೋಗ್ಯ ಹಾಳು ಮಾಡಿಕೊಳ್ಳುವ ಜತೆಗೆ ಆಸ್ಪತ್ರೆಗಳಿಗೆ ಲಕ್ಷಾಂತರ ಹಣ ವ್ಯಯಿಸುತ್ತಿದ್ದಾರೆ. ರಾಸಾಯಿನಿಕ ಗೊಬ್ಬರ, ಅತಿಯಾದ ಕ್ರಿಮಿನಾಶಕಗಳ ಬಳಕೆಯಿಂದ ನಮ್ಮ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಜತೆಗೆ ನಾವು ವಿಷಯುಕ್ತ ಆಹಾರ ಖರೀದಿಸಬೇಕಾದ ಪರಿಸ್ಥಿತಿ ಇದೆ. ರೈತರು ಸಾವಯವ, ನೈಸರ್ಗಿಕ ಮತ್ತು ಜೈವಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಸಾವಯವ ಕೃಷಿ ಮೂಲಕ ಬೆಳೆದ ಬೆಳೆಗಳು ಮನುಷ್ಯರ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಆಸ್ಪತ್ರೆ ಖರ್ಚು ಉಳಿತಾಯವಾಗುತ್ತದೆ. ರೈತರು ಮತ್ತು ಗ್ರಾಹಕರನ್ನು ನೇರ ಸಂಪರ್ಕಿಸುವ ನಿಟ್ಟಿನಲ್ಲಿ ಸಾವಯವ ಸಂತೆ ಆಯೋಜಿಸಲಾಗಿದೆ. ಇದರಿಂದ ರೈತರಿಗೆ ಉತ್ತೇಜನ ಸಿಗಲಿದೆ ಗ್ರಾಹಕರಿಗೆ ಗುಣಮಟ್ಟದ ಆಹಾರ ಸಿಗಲಿದೆ ಎಂದರು.
ರೈತಸಂಘ ಜಿಲ್ಲಾದ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಮುಖಂಡರಾದ ಮುರುಳೀಧರ್, ರಾ.ಸ.ಹನುಮಂತೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net