ಕೇಂದ್ರ ಸರ್ಕಾರದ ವಿವಿಧ ಕಾಯ್ದೆಗಳಿಗೆ ವಿರೋಧ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ತಾಲೂಕು ಸಮಿತಿ ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಮದ್ದೂರು ನಗರದಲ್‌ಲಿ ಬೆಂಗಳೂರು ಮೈಸೂರು ಹದ್ದಾರಿ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಕೃಷ್ಣೇಗೌಡ, ಜಯಮ್ಮ, ಶಿವಕುಮಾರ್, ಪ್ರದೀಪ್, ಅರುಣ್‌ಕುಮಾರ್, ನೇತ್ರಾವತಿ, ಶೋಭಾ ಇದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ತಾಲೂಕು ಸಮಿತಿ ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಮದ್ದೂರು ನಗರದಲ್‌ಲಿ ಬೆಂಗಳೂರು ಮೈಸೂರು ಹದ್ದಾರಿ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಕೃಷ್ಣೇಗೌಡ, ಜಯಮ್ಮ, ಶಿವಕುಮಾರ್, ಪ್ರದೀಪ್, ಅರುಣ್‌ಕುಮಾರ್, ನೇತ್ರಾವತಿ, ಶೋಭಾ ಇದ್ದರು.
Published on
ಮದ್ದೂರು: ನಾಲ್ಕು ಕಾರ್ಮಿಕ ಕಾಯ್ದೆಗಳ ರದ್ದು, ನರೇಗಾ ಯೋಜನೆ ಮರು ಸ್ಥಾಪನೆ, ವಿಬಿ ಜಿ ರಾಮ್ ಜಿ ಕಾಯ್ದೆ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ತಾಲೂಕು ಸಮಿತಿ ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೆದ್ದಾರಿಗೆ ಆಗಮಿಸಿದ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಸಂಚಾರ ತಡೆದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಭೂ ಸ್ವಾಧೀನ ಕಾಯ್ದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಖಾಸಗೀರಣ ಮಾಡಬಾರದು. ಬೀಜ ಮಸೂದೆ ಕಾಯ್ದೆ, ವಿಮಾ ತಿದ್ದುಪಡಿ, ಶಾಂತಿ ಕಾಯ್ದೆಗಳು ಜನ ಹಾಗೂ ಕಾರ್ಮಿಕರ ವಿರೋಧಿಯಾಗಿದ್ದು ಈ ಕಾಯ್ಕೆಗಳನ್ನು ತತಕ್ಷಣ ಹಿಂಪಡೆಯಬೇಕೆಂದು ಸರ್ಕಾರಗಳನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಜಾರಿಗೆ ತಂದಿರುವ ಗೆಜೆಟ್ ನೋಟಿಫೀಕೇಷನ್ ವಾಪಸ್ ಪಡೆಯಬೇಕು ಮತ್ತು ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಮಸೂಧೆಗಳನ್ನುವಿರೋಧಿಸಲಾಗುವುದು ಎಂದರು.
2025 ಆಗಸ್ಟ್ ತಿಂಗಳಲ್ಲಿ ಕನಿಷ್ಠ ವೇತನದ ಹೆಚ್ಚಳ ಕುರಿತು ಕನಿಷ್ಠ ವೇತನಾ ಸಲಹಾ ಮಂಡಳಿ ನೀಡಿರುವ ಶಿಫಾರಸ್ಸಿನ ಅಂತಿಮ ಅಧಿ ಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಗೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಮೂಲಕ ತಾಲೂಕು ಕಚೇರಿಯ ಮುಂದಿರುವ ಹೆದ್ದಾರಿಗೆ ಆಗಮಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಎಂ.ಬಿ.ಜಯಮ್ಮ, ಪ್ರಣೀತಾ, ಶಿವಕುಮಾರ್, ಪ್ರದೀಪ್, ನೇತ್ರಾವತಿ, ಲೋಕೇಶ್, ಮಹಾಂತೇಶ್, ನಗಮಣಿ, ಮಕ್ಬಲ್ ಪಾಷ, ಬಾಬು, ಮಂಚೇಗೌಡ, ಅರುಣ್‌ಕುಮಾರ್, ಶೋಭಾ, ಸುನಂದಮ್ಮ, ಪುಟ್ಟಗೌರಮ್ಮ, ವಿಶ್ವನಾಥ್, ಭಾನುಪ್ರಕಾಶ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net