ಪಿಟಿಸಿಎಲ್ ಕಾಯ್ದೆ ವಜಾ ಪ್ರಯತ್ನಕ್ಕೆ ವಿರೋಧ

ಪಾಂಡವಪುರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ದಸಂಸ ಮುಖಂಡರ ಸಮಸ್ಯೆಯನ್ನು ಉಪವಿಭಾಗಾಧಿಕಾರಿ ಶ್ರೀನಿವಾಸ್ ಆಲಿಸಿದರು.
ಪಾಂಡವಪುರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ದಸಂಸ ಮುಖಂಡರ ಸಮಸ್ಯೆಯನ್ನು ಉಪವಿಭಾಗಾಧಿಕಾರಿ ಶ್ರೀನಿವಾಸ್ ಆಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ವಿರುದ್ಧ ದಸಂಸ ಮುಖಂಡರು ಕಿಡಿ
ಪಾಂಡವಪುರ: ಪಿಟಿಸಿಎಲ್ ಕಾಯ್ದೆ ವಜಾಗೊಳಿಸಿರುವ ನಡೆ ಖಂಡಿಸಿ ಗುರುವಾರ ಪಟ್ಟಣದ ತಾಲೂಕು ಕಚೇರಿ ಎದುರು ದಸಂಸ ಮುಖಂಡರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಅಧಿನಿಯಮ-1978 ಪಿಟಿಸಿಎಲ್ ಕಾಯ್ದೆ ಜಾರಿಯಲ್ಲಿದೆ. ಈ ಬಗ್ಗೆ ಅರಿವು ಪಿಟಿಸಿಎಲ್ ಕಾಯ್ದೆಯನ್ನು ವಜಾಗೊಳಿಸಿದ್ದಾರೆ ಎಂದು ಕಿಡಿಕಾರಿದರು.
ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನಿಯಮ ಪಾಲಿಸಿಲ್ಲ. ಬದಲಾಗಿ ಪಿಟಿಸಿಎಲ್ ಕಾಯ್ದೆ ವಜಾ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಶ್ರೀನಿವಾಸ್ ಸಮಸ್ಯೆ ಆಲಿಸಿದರು. ದಾಖಲಾತಿ ಪರಿಶೀಲನೆ ನಡೆಸಿ 15 ದಿನದೊಳಗೆ ತಹಸೀಲ್ದಾರ್ ನೀಡಿರುವ ವರದಿ ರದ್ದುಗೊಳಿಸಿ ಆದೇಶಿಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಲಾಯಿತು.
ದಸಂಸ ಜಿಲ್ಲಾ ಸಂಚಾಲಕ ದೇವರಾಜು, ತಾಲೂಕು ಸಂಚಾಲಕ ವಿಜಯ್‌ಕುಮಾರ್ ಬಿ.ಕೆ., ರಾಮಯ್ಯ ಉರಗಲವಾಡಿ, ಹಾರೋಹಳ್ಳಿ ಸೋಮು, ಯೋಗೇಶ್, ಬ್ಯಾಡರಹಳ್ಳಿ ಪ್ರಕಾಶ್, ಹಾಳಪ್ಪ, ಶಿವರಾಜು, ಕುಮಾರ್, ಲಿಂಗರಾಜು, ಚಂದ್ರಶೇಖರ್, ಟಿ.ಕೆ.ಮುದ್ದಯ್ಯ, ದೊಡ್ಡವೆಂಕಟಯ್ಯ, ನರಸಿಂಹಮೂರ್ತಿ, ದೇವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net