ಹಲವು ವರ್ಷಗಳಿಂದ ಪಟ್ಟಣವಾಗಿದ್ದ ಮದ್ದೂರು ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿತ್ತು. ಕೆ.ಎಂ.ಉದಯ್ ಶಾಸಕರಾದ ಬಳಿಕ ಪುರಸಭೆಯಾಗಿದ್ದ ಮದ್ದೂರನ್ನು ನಗರಸಭೆಯನ್ನಾಗಿಸಿದ್ದಾರೆ. ಅದರ ಜತೆಗೆಯೇ ಪಟ್ಟಣದ ಕಿರಿದಾದ ಪೇಟೆಬೀದಿಯನ್ನು 80 ಅಡಿಗೆ ವಿಸ್ತರಿಸುವ ಮೂಲಕ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ. ಅದಕ್ಕೆ ನಾವು ಸಹಕರಿಸಬೇಕೆಂದು ಪಟ್ಟಣ ನಿವಾಸಿಗಳಾದ ಸಂತೋಷ್‌ಗೌಡ, ಪಿ.ಸಂದರ್ಶ, ಸಚಿನ್, ಸಂತೋಷ್, ವೆಂಕಟೇಶ್, ಹರೀಶ್, ಲಕ್ಷ್ಮಣ್, ಶಿವನಂಜಯ್ಯ, ರಿತೇಶ್, ಇಂತಿಯಾಜ್‌ವುಲ್ಲಾ ಖಾನ್, ಕೀರ್ತಿ, ಶಿವಪುರ ಅನಿಲ್ ಮೆಚ್ಚುಗೆ ವ್ಯಕ್ತಪಡಿಸಿದರು.