ಬೈಕ್-ಸ್ಕೂಟರ್ ಡಿಕ್ಕಿಯಾಗಿ ಒಬ್ಬ ಸಾವು

One dead in bike-scooter collision
One dead in bike-scooter collision
Published on

ಪ್ರಮುಖ ಮುಖ್ಯಾಂಶಗಳು

  • ಮೂವರಿಗೆ ಗಂಭೀರ ಗಾಯ
ಕೆ.ಆರ್.ಸಾಗರ : ಕೆ.ಆರ್.ಸಾಗರದ ಬೃಂದಾವನ ರಸ್ತೆಯ ಎಂ.ಎಂ.ಕೆ. ಲಾಡ್ಜ್ ಮುಂಭಾಗ ಎರಡು ದ್ವಿಚಕ್ರವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಬೈಕ್ ಸವಾರ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ವಿರೇಶ್(39) ಮೃತ ಸವಾರ.ಬೃಂದಾವನ ಕಡೆಗೆ ಬೈಕ್‌ನಲ್ಲಿ ಸ್ನೇಹಿತನ ಜತೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ವೀರೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net