ಕೆ.ಆರ್.ಸಾಗರ: ಕೃಷ್ಣರಾಜಸಾಗರ ಸಮೀಪದ ಚಿಕ್ಕಾಯರಹಳ್ಳಿ ಗ್ರಾಮದಲ್ಲಿ ಶ್ರೀಬಸವೇಶ್ವರ ಜಯಂತಿ ಪ್ರಯುಕ್ತ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಾಲಕರು, ಯುವಕರು ಬಣ್ಣದ ನೀರು ಎರಚಿ ಓಕುಳಿಯಾಡಿದರು.
Published on:
Copied
Follow Us
ಕೆ.ಆರ್.ಸಾಗರ: ಕೃಷ್ಣರಾಜಸಾಗರ ಸಮೀಪದ ಚಿಕ್ಕಾಯರಹಳ್ಳಿ ಗ್ರಾಮದಲ್ಲಿ ಶ್ರೀಬಸವೇಶ್ವರ ಜಯಂತಿ ಪ್ರಯುಕ್ತ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಓಕಳಿ ಕುಂಡದಲ್ಲಿ ಬಣ್ಣದ ನೀರು ತುಂಬಿಸಲಾಗಿತ್ತು. ದೇವರಿಗೆ ಮಹಾಮಂಗಳಾರತಿ ಸಲ್ಲಿಸಿದ ಬಳಿಕ ಬಾಲಕರು, ಯುವಕರು ಬಣ್ಣದ ನೀರು ಎರಚಾಡಿ ಓಕಳಿಯಾಡಿದರು. ಸಂಜೆ ಶ್ರೀಬಸವೇಶ್ವರರ ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು.